Six meditation techniques directly from Yoga Sutras - for beginners

Wednesday, December 13, 2023

ನಾಲ್ವರು ವಿದೇಶಿ ಮೂಲದ ಹಿಂದೂ ಪುನರುಜ್ಜೀವನಕಾರರು

ನಾಲ್ವರು ವಿದೇಶಿ ಮೂಲದ ಹಿಂದೂ ಪುನರುಜ್ಜೀವನಕಾರರು

ಪರಿಚಯ

18 ನೇ ಶತಮಾನದ ಉತ್ತರಾರ್ಧದಲ್ಲಿ ಬಂಗಾಳದಲ್ಲಿ ಹಿಂದೂ ಧರ್ಮದೊಳಗೆ ಸುಧಾರಣಾವಾದಿ ಚಳುವಳಿಯು ಹಿಂದೂ ಧರ್ಮದಲ್ಲಿನ ಸತಿ ಇತ್ಯಾದಿಗಳಂತಹ ದುಷ್ಕೃತ್ಯಗಳನ್ನು ತೊಡೆದುಹಾಕಲು ಹೆಚ್ಚಿನ ಗಮನವನ್ನು ನೀಡಿತು. ಇದು ನಂತರ ಸ್ವಾತಂತ್ರ್ಯ ಚಳುವಳಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿ ರಾಷ್ಟ್ರವ್ಯಾಪಿ ಹಿಂದೂ ಪುನರುಜ್ಜೀವನ ಚಳುವಳಿಯನ್ನು ಹುಟ್ಟುಹಾಕಿತು.. 

ಸ್ವಾಮಿ ವಿವೇಕಾನಂದ, ಶ್ರೀ ಅರಬಿಂದೋ... ಇತ್ಯಾದಿ ಮಹಾಪುರುಷರ ಕೈಂಕರ್ಯದಿಂದಾಗಿ, ಹಿಂದೂ ಪುನರುಜ್ಜೀವನವು ವೇಗದ ಗತಿಯನ್ನು ಪಡೆಯಿತು. ಇವರ ಕೃತಿಗಳು ಪಾಶ್ಚಾತ್ಯ ಪಕ್ಷಪಾತ ಮತ್ತು ಸೆಮಿಟಿಕ್ ಮತ್ತು ಮಾರ್ಕ್ಸ್‌ವಾದಿ ಪ್ರಚಾರವನ್ನು ಸಾರ್ವಜನಿಕವಾಗಿ ಟೀಕಿಸಿದವು.

ಹಿಂದೂ ಪುನರುಜ್ಜೀವನದ ಅಗತ್ಯವು ಮೂರು ಪ್ರಮುಖ ಕಾರಣಗಳಿಂದ ಹುಟ್ಟಿಕೊಂಡಿತು ಮತ್ತು ಇಂದೂ ಬೆಳೆಯುತ್ತಿದೆ: (1) ಪಾಶ್ಚಿಮಾತ್ಯ ಇಂಡಾಲಜಿಸ್ಟ್ ಗಳು ವೈದಿಕ ಸಾಹಿತ್ಯ ಮತ್ತು ಸಂಪ್ರದಾಯವನ್ನು ಕೀಳಾಗಿ ಕಾಣಿಸುವುದು; (2) ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮವನ್ನು ಹರಡುವ ಗುರಿಯನ್ನು ಹೊಂದಿರುವ ಸೆಮಿಟಿಕ್ ಪ್ರಚಾರಕರು ಹಣದ ಬಲ ಹೊಂದಿರುವುದು; ಮತ್ತು (3) ಮಾರ್ಕ್ಸ್ವಾದಿ ಪ್ರಚಾರವು ಭಾರತೀಯ ರಾಷ್ಟ್ರವನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವುದು.

ಭಾರತೀಯ ವಿದ್ವಾಂಸರ ಜೊತೆಗೆ, ವೈದಿಕ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೇಲೆ ಹೇಳಿದ ಪ್ರಚಾರದ ಪಕ್ಷಪಾತವಿಲ್ಲದೆ ಪ್ರಾಮಾಣಿಕವಾಗಿ ಅಧ್ಯಯನ ಮಾಡಿದ ಅನೇಕ ವಿದೇಶಿಯರೂ ಇದ್ದಾರೆ. ಅವರು ಕೂಡ ಪ್ರಚಲಿತ "ಹಿಂದೂ ಪುನರುಜ್ಜೀವನ" ದ ಬೌದ್ಧಿಕ ಆಯಾಮಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ವೇದಿಕ್ ಟ್ರೈಬ್ ಗೆ ಈ ನಾಲ್ಕು ವಿದೇಶಿ ಮೂಲದ ಹಿಂದೂ ಪುನರುಜ್ಜೀವನಕಾರರ ಕುರಿತು ಪರಿಚಯಾತ್ಮಕ ಸರಣಿಯನ್ನು ನಿಮಗೆ ತರಲು ಸಂತೋಷವಾಗಿದೆ: ಕೊಯೆನ್ರಾಡ್ ಎಲ್ಸ್ಟ್, ಡೇವಿಡ್ ಫ್ರಾಲಿ, ಸ್ಟೀಫನ್ ನ್ಯಾಪ್ ಮತ್ತು ಆನಂದ ಕುಮಾರಸ್ವಾಮಿ. ನಮ್ಮ ಮುಂದಿನ ಬರಹದಲ್ಲಿ, ನಾವು ಕೊಯೆನ್‌ರಾಡ್ ಎಲ್ಸ್ಟ್ ಅವರನ್ನು ಪರಿಚಯಿಸುತ್ತೇವೆ.

ವೈದಿಕ ಸಂಪ್ರದಾಯವನ್ನು ಬೆಂಬಲಿಸುವ ವಿದೇಶಿಯರನ್ನು ಹೆಸರಿಸುವ ಮೂಲಕ ವೈದಿಕ ಸಂಪ್ರದಾಯದ ಶ್ರೇಷ್ಠತೆಯನ್ನು ಪ್ರದರ್ಶಿಸಲು ನಾವು ಉದ್ದೇಶಿಸಿಲ್ಲ. ಬದಲಾಗಿ, ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಸಾಕಷ್ಟು ಕುತೂಹಲವನ್ನು ನಿಮ್ಮಲ್ಲಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ.

ಒಳ್ಳೆಯದಾಗಲಿ.

ಮಧ್ವೇಶ ಕೆ
ವೇದಿಕ್ ಟ್ರೈಬ್ 

— 

1. ಕೊಯೆನ್ರಾಡ್ ಎಲ್ಸ್ಟ್

ಕೋನ್ರಾಡ್ ಎಲ್ಸ್ಟ್ ಸಮಕಾಲೀನ ಹಿಂದೂ ಪುನರುಜ್ಜೀವನಕಾರ ಮತ್ತು ಇವರು ಬೆಲ್ಜಿಯಂನಲ್ಲಿ ಜನಿಸಿದವರು.

ಅವರ ಪ್ರಭಾವಶಾಲಿ ಕೃತಿಗಳು: Indigenous Indians: Agastya to Ambedkar; Return of the Swastika: Hate and Hysteria versus Hindu Sanity; Negationism in India: Concealing the Record of Islam ಇತ್ಯಾದಿ

ಅವರು "ಔಟ್ ಆಫ್ ಇಂಡಿಯಾ ತಿಯರಿ" ಯ ಬೆಂಬಲಿಗರಾಗಿದ್ದಾರೆ. ಇದು "ಆರ್ಯನ್ ಇನ್ವೇಷನ್ ತಿಯರಿ" ಗೆ ವ್ಯತಿರಿಕ್ತವಾಗಿದೆ. 

ಆರ್ಯನ್ ಇನ್ವೇಷನ್ ತಿಯರಿಯು, ಆರ್ಯರು ಭಾರತೀಯ ಉಪಖಂಡಕ್ಕೆ ಆಕ್ರಮಣ ಮಾಡಿದರು / ವಲಸೆ ಬಂದರು, ವೇದಗಳನ್ನು ಪರಿಚಯಿಸಿದರು ಮತ್ತು ದ್ರಾವಿಡರನ್ನು ದಕ್ಷಿಣಕ್ಕೆ ತಳ್ಳಿದರು ಎಂದು ಊಹಿಸುತ್ತದೆ. 

ಆದರೆ ಔಟ್ ಆಫ್ ಇಂಡಿಯಾ ತಿಯರಿಯು, ವೈದಿಕ ಜನರು ಭಾರತೀಯ ಉಪ-ಖಂಡದ ಸ್ಥಳೀಯರು ಎಂದು ಮತ್ತು ಕೆಲವರು ವಲಸೆ ಹೋಗಿ ವಿಭಿನ್ನ ಸಂಸ್ಕೃತಿಗಳು, ಸಮಾಜಗಳು ಮತ್ತು ನಾಗರಿಕತೆಗಳನ್ನು ಸ್ಥಾಪಿಸಿದರು ಎಂದು ಪ್ರತಿಪಾದಿಸುತ್ತದೆ. 

ಕೋನ್ರಾಡ್ ಎಲ್ಸ್ಟ್ಅವರು ಅವರ ತೀಕ್ಷ್ಣ ವಾದಗಳಿಗಾಗಿ ಟೀಕಿಸಲ್ಪಡುತ್ತಾರೆ ಮತ್ತು ಇಸ್ಲಾಮೋಫೋಬಿಯಾವನ್ನು ಹರಡುತ್ತಾರೆ ಎಂದೂ ಆರೋಪಿಸಲಾಗುತ್ತದೆ .

ಟೀಕೆಗಳು ಮತ್ತು ಆರೋಪಗಳ ಹೊರತಾಗಿಯೂ, ಅವರ ಕೃತಿಗಳು ಪ್ರಚಲಿತ ಹಿಂದೂ ಪುನರುಜ್ಜೀವನ ಚಳುವಳಿಯಲ್ಲಿ ಬಹಳ ಪ್ರಭಾವಶಾಲಿಯಾಗಿವೆ. 

ಅವರ ಹಲವಾರು ಪುಸ್ತಕಗಳನ್ನು ಓದುವುದನ್ನು ನಾವು ನಿಮಗೆ ಶಿಫಾರಸು ಮಾಡುತ್ತೇವೆ; ವಿಶೇಷವಾಗಿ Update on the Aryan Invasion Debate and Asterisk in Bhāropīyasthān ಓದಿ.

ನಮ್ಮ ಮುಂದಿನ ಬರಹದಲ್ಲಿ, ನಾವು ಡೇವಿಡ್ ಫ್ರಾಲಿ (ವಾಮದೇವ ಶಾಸ್ತ್ರಿ) ಅವರನ್ನು ಪರಿಚಯಿಸುತ್ತೇವೆ

ಮಧ್ವೇಶ ಕೆ
ವೇದಿಕ್ ಟ್ರೈಬ್

—- 

2. ಡೇವಿಡ್ ಫ್ರಾಲಿ (ವಾಮದೇವ ಶಾಸ್ತ್ರಿ)

ಡೇವಿಡ್ ಫ್ರಾಲಿ ಸಮಕಾಲೀನ ಹಿಂದೂ ಪುನರುಜ್ಜೀವನಕಾರ ಮತ್ತು ಯುಎಸ್ಎಯಲ್ಲಿ ಜನಿಸಿದವರು.

ಅವರ ಪ್ರಭಾವಶಾಲಿ ಕೃತಿಗಳು: What Is Hinduism?; Wisdom of the Ancient Seers: Mantras of the Rig Veda; Ayurveda and the Mind ಇತ್ಯಾದಿ.

ಅವರು ಅದ್ವೈತ ವೇದಾಂತದ ಅನುಯಾಯಿಯಾಗಿದ್ದಾರೆ ಮತ್ತು "ಆರ್ಯನ್ ಮೈಗ್ರೇಶನ್ ತಿಯರಿ" ಯನ್ನು ವ್ಯಾಪಕವಾಗಿ ಟೀಕಿಸಿದ್ದಾರೆ - ಅದನ್ನು ಮಾರುವೇಷದಲ್ಲಿರುವ ಇನ್ವೇಷನ್ ತಿಯರಿಯೇ ಎಂದು ಕರೆಯುತ್ತಾರೆ. ಋಗ್ವೇದಕ್ಕೆ ಅವರು ಮಾಡಿರುವ ಯೋಗದ ವ್ಯಾಖ್ಯಾನವು ಸಾಂಪ್ರದಾಯಿಕ ಮತ್ತು ಸಮಕಾಲೀನ ಶಾಸ್ತ್ರಗಳಿಗೆ ಸವಾಲು ಒಡ್ಡುತ್ತದೆ ಮತ್ತು ಹೆಚ್ಚಿನ ಅಧ್ಯಯನಕ್ಕಾಗಿ ಹಲವು ಕ್ಷೇತ್ರಗಳನ್ನು ತೆರೆದಿಡುತ್ತದೆ.

ಅವರ ಕೃತಿಗಳು ಪುರಾತತ್ವ ಮತ್ತು ಇತರ ಪುರಾವೆಗಳ ಕೊರತೆಯಿಂದಾಗಿ ಟೀಕಿಸಲ್ಪಟ್ಟಿವೆ.

ಟೀಕೆಗಳ ಹೊರತಾಗಿಯೂ, ಅವರ ಕೃತಿಗಳು ಪ್ರಸ್ತುತ ಹಿಂದೂ ಪುನರುಜ್ಜೀವನ ಚಳುವಳಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿವೆ. 

ಅವರ ಹಲವು ಪುಸ್ತಕಗಳನ್ನು ಓದುವುದನ್ನು ನಾವು ನಿಮಗೆ ಶಿಫಾರಸು ಮಾಡುತ್ತೇವೆ; ವಿಶೇಷವಾಗಿ: “In Search of the Cradle of Civilization” (ಇದು ಸುಭಾಷ್ ಕಾಕ್ ಮತ್ತು ಜಾರ್ಜ್ ಫ್ಯೂರ್‌ಸ್ಟೈನ್ ಅವರೊಂದಿಗೆ ಸಹ-ಲೇಖಕರಾಗಿ ಬರೆದದ್ದಾಗಿದೆ)

ನಮ್ಮ ಮುಂದಿನ ಬರಹದಲ್ಲಿ, ನಾವು ಸ್ಟೀಫನ್ ನ್ಯಾಪ್ (ನಂದನಂದನ ದಾಸ) ಅನ್ನು ಪರಿಚಯಿಸುತ್ತೇವೆ

ಮಧ್ವೇಶ ಕೆ
ವೇದಿಕ್ ಟ್ರೈಬ್

—- 

3. ಸ್ಟೀಫನ್ ನ್ಯಾಪ್ (ನಂದನಂದನ ದಾಸ)

ಸ್ಟೀಫನ್ ನ್ಯಾಪ್ ಸಮಕಾಲೀನ ಹಿಂದೂ ಪುನರುಜ್ಜೀವನಕಾರ ಮತ್ತು ಯುಎಸ್ಎಯಲ್ಲಿ ಜನಿಸಿದವರು.

ಅವರ ಪ್ರಭಾವಶಾಲಿ ಕೃತಿಗಳು: Crimes against India and the need to protect its ancient Vedic tradition; The heart of Hinduism; Seeing spiritual India ಇತ್ಯಾದಿ.

ಅವರು ಶ್ರೀ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಂದ ತತ್ತ್ವವಾದದ (ಹರೇ-ಕೃಷ್ಣ ಚಳುವಳಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ) ಭಕ್ತಿ ಸಂಪ್ರದಾಯಕ್ಕೆ ದೀಕ್ಷೆ ಪಡೆದರು. ಸಂಕೀರ್ಣವಾದ ಸಮಸ್ಯೆಗಳನ್ನು ಸಾಮಾನ್ಯ ಜನರ ತಿಳುವಳಿಕೆಗೆ ತರುವಲ್ಲಿ ಅವರ ಕೃತಿಗಳು ಪ್ರಭಾವಶಾಲಿಯಾಗಿವೆ.

ಅವರ ಕೃತಿಗಳು ಪುರಾತತ್ವ ಮತ್ತು ಇತರ ಪುರಾವೆಗಳ ಕೊರತೆಯಿಂದಾಗಿ ಟೀಕಿಸಲ್ಪಡುತ್ತವೆ.

ಟೀಕೆಗಳ ಹೊರತಾಗಿಯೂ, ಅವರ ಕೃತಿಗಳು ಪ್ರಸ್ತುತ ಹಿಂದೂ ಪುನರುಜ್ಜೀವನ ಚಳುವಳಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿವೆ. 

ಅವರ ಹಲವು ಪುಸ್ತಕಗಳನ್ನು ಓದುವುದನ್ನು ನಾವು ನಿಮಗೆ ಶಿಫಾರಸು ಮಾಡುತ್ತೇವೆ; ವಿಶೇಷವಾಗಿ: The Aryan Invasion Theory: The Final Nail in its Coffin.

ನಮ್ಮ ಮುಂದಿನ ಬರಹದಲ್ಲಿ ನಾವು ಆನಂದ ಕುಮಾರಸ್ವಾಮಿಯವರನ್ನು ಪರಿಚಯಿಸುತ್ತೇವೆ

ಮಧ್ವೇಶ ಕೆ
ವೇದಿಕ್ ಟ್ರೈಬ್

—- 

4. ಆನಂದ ಕುಮಾರಸ್ವಾಮಿ

ಆನಂದ ಕುಮಾರಸ್ವಾಮಿ ಅವರು ಭಾರತೀಯ ಕಲೆ ಮತ್ತು ತತ್ವಶಾಸ್ತ್ರವನ್ನು ಪಾಶ್ಚಿಮಾತ್ಯ ಪ್ರೇಕ್ಷಕರಿಗೆ ಅದರ ಮೂಲ ರೂಪದಲ್ಲಿ ಪರಿಚಯಿಸಿದ ವಿದ್ವಾಂಸರು. ಅವರು ಬ್ರಿಟಿಷ್ ಸಿಲೋನ್ ಅಂದರೆ ಈಗಿನ ಶ್ರೀಲಂಕಾದಲ್ಲಿ ಜನಿಸಿದವರು.

ಅವರ ಪ್ರಭಾವಶಾಲಿ ಕೃತಿಗಳು: Introduction to Indian art; Origin of Buddha image; A new approach to Veda. ಇತ್ಯಾದಿ.

ಅವರು ತಮ್ಮ ಕಾಲದ ಹಿಂದೂ ಪುನರುಜ್ಜೀವನಕಾರರೊಂದಿಗೆ ಗುರುತಿಸಲ್ಪಡಲಿಲ್ಲ ಮತ್ತು ಹೆಚ್ಚಾಗಿ ಶಿಕ್ಷಣತಜ್ಞ, ಅತೀಂದ್ರಿಯ ತತ್ವಶಾಸ್ತ್ರಜ್ಞ ಮತ್ತು ಮೆಟಾಫಿಸಿಷಿಯನ್ ಎಂದು ಗುರುತಿಸಲ್ಪಟ್ಟಿದ್ದರು. ಆದಾಗ್ಯೂ, ಅವರ ಕೃತಿಗಳು ಅವರ ಕಾಲದ ಹಿಂದೂ ಪುನರುಜ್ಜೀವನಕಾರರಿಗೆ ಮತ್ತು ಮುಂದಿನ ಪೀಳಿಗೆಗೆ ಅಗತ್ಯವಾದ ವಸ್ತುವಾಯಿತು. 

ಅವರ ಕೃತಿಗಳು ಶೈಕ್ಷಣಿಕ ಸಂಶೋಧನೆಗಿಂತ ಹೆಚ್ಚು ಅತೀಂದ್ರಿಯತೆಯನ್ನು ಒಳಗೊಂಡಿವೆ ಎಂದು ಟೀಕಿಸಲಾಗಿದೆ.

ಟೀಕೆಗಳ ಹೊರತಾಗಿಯೂ, ಅವರ ಕೃತಿಗಳು ಪ್ರಸ್ತುತ ಹಿಂದೂ ಪುನರುಜ್ಜೀವನ ಚಳುವಳಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿವೆ. 

ಅವರ ಹಲವು ಪುಸ್ತಕಗಳನ್ನು ಓದುವುದನ್ನು ನಾವು ನಿಮಗೆ ಶಿಫಾರಸು ಮಾಡುತ್ತೇವೆ; ವಿಶೇಷವಾಗಿ: The Dance of Shiva – Fourteen Indian essays.

ವೇದಿಕ್ ಟ್ರೈಬ್ ಗೆ ನಾಲ್ಕು ವಿದೇಶಿ ಮೂಲದ ಹಿಂದೂ ಪುನರುಜ್ಜೀವನಕಾರರ ಕುರಿತು ಪರಿಚಯಾತ್ಮಕ ಸರಣಿಯನ್ನು ತಂದದ್ದಕ್ಕೆ ಸಂತೋಷವಾಗಿದೆ.

ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಸಾಕಷ್ಟು ಕುತೂಹಲವನ್ನು ನಿಮ್ಮಲ್ಲಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ.

ಒಳ್ಳೆಯದಾಗಲಿ.

ಮಧ್ವೇಶ ಕೆ
ವೇದಿಕ್ ಟ್ರೈಬ್ 


No comments:

Post a Comment