ನಾನು ನನ್ನ ಗುರದೇವನಾದ ಸಾಕ್ಷಾತ್ ಪರಮಾನಂದನು, ಸಚ್ಚಿದಾನಂದ ಸ್ವರೂಪನು, ಆನಂದಮೂರ್ತಿಯಾದ, ಯಾರ ಸಾನಿಧ್ಯ ಮಾತ್ರದಿಂದ ಈ ನನ್ನ ಶರೀರವು ಚಿದಾನಂದ ಚಿನ್ಮಯ ಹಾಗೂ ಪರಮಾನಂದಗೊಳ್ಳುವದೋ ಅಂಥ ಮತ್ಯೇಂದ್ರನಾಥನಿಗೆ ನಮಸ್ಕಾರ ಮಾಡುತ್ತೇನೆ.
अन्तर्निश्चलितात्मदीपकलिका स्वाधारबन्धादिभि र्यो योगी युगकल्पकालकलनातत्त्वं च जेगीयते ।
ज्ञानामोदमहोदधिः समभवद् यत्रादिनाथः स्वयं व्यक्ताव्यक्त गुणाधिकं तमनिशं श्रीमीननाथं भजे ॥೨||
He, through yogic practices like muladhara bandha, uddiyana bandha, jalandhara bandha etc, has realized the art of the luminous & imminent Lord in the heart-lotus. (He) through yogic practices has won the knowledge of time's secrets which float around appearing as yugas. (I) solute the Sri Minanatha's guru - Mathsendranatha, who himself is an ocean of bliss.
ಆತನು ಮೂಲಾಧಾರ ಬಂಧ, ಉಡ್ಡಿಯಾನ ಬಂಧ, ಜಾಲಂಧರ ಬಂಧ ಮೊದಲಾದ ಯೋಗಾಭ್ಯಾಸದ ಮೂಲಕ ಹೃದಯಕಮಲದಲ್ಲಿ ನಿಶ್ಚಲ
ದೀಪಸ್ವರೂಪನಾದ ಪರಮಾತ್ಮನ ಕಲೆಯನ್ನು ಸಾಕ್ಷಾತ್ಕಾರಗೊಳಿಸಿ ಯುಗಾದಿಯ ರೂಪದಲ್ಲಿ ಚಲಿಸುತ್ತಿರುವ ಕಾಲದ ರಹಸ್ಯಗಳನ್ನು ಹಾಗೂ ಸಮಸ್ತ ತತ್ವಗಳನ್ನು ಯೋಗಾಭ್ಯಾಸದಿಂದ ಜಯಪ್ರಾಪ್ತಿ ಮಾಡಿಕೊಂಡ ಹಾಗೂ ಸ್ವತಃ ಜ್ಞಾನ ಹಾಗೂ ಆನಂದದ ಮಹಾಸಮುದ್ರನಾದ ಆದಿನಾಥನ ಸ್ವರೂಪನಾದ ಆ ಶ್ರೀ ಮೀನನಾಥನ ಗುರು ಮತ್ಯೇಂದ್ರನಾಥನಿಗೆ ನಮಿಸುವೆನು.
नमस्कृत्य गुरुं भक्त्या गोरक्षो ज्ञानमुत्तमम्
अभीष्टं योगिनां ब्रूते परमानन्दकारकम् ॥೩||
With devotion, (I) bow down to Gorakhnath, who blesses Paramananda and explain the superior knowledge which grants yogis their siddhis.
ಪರಮಾನಂದ ಪ್ರದಾನ ಮಾಡುವ ಗೋರಖನಾಥ ಗುರುವಿಗೆ ಭಕ್ತಿಪೂರ್ವಕ ನಮಿಸಿ, ಯೋಗಿಗಳ ಅಭೀಷ್ಟವಾದ (ಸಿದ್ಧಿದಾಯಕ) ಉತ್ತಮ ಜ್ಞಾನದ ವರ್ಣನೆ ಮಾಡುವರು.
गोरक्षः शतकं वक्ति योगिनां हितकाम्यया ।
ध्रुवं यस्यावबोधेन जायते परमं पदम् ॥೪||
Gorakhnath discourses a hundred verses for the benefit of the yogis.
With its proper illuminative exposition, salvation or kaivalya is attained for sure.
ಗೋರಕ್ಷನಾಥನು ಯೋಗಿಗಳ ಹಿತಕ್ಕಾಗಿ ಒಂದು ನೂರು ಶ್ಲೋಕಗಳುಳ್ಳ ಶತಕವನ್ನು ಪ್ರವಚನ ಮಾಡುತ್ತಾನೆ.
ಅದರ ಸರಿಯಾದ ಪ್ರಕಾಶದ ಬೋಧನೆಯಿಂದ ನಿಶ್ಚಯವಾಗಿ ಪರಮ ಪದದೆ ಜೀವನ್ಮುಕ್ತಿ ಅಥವಾ ಕೈವಲ್ಯದ ಪ್ರಾಪ್ತಿಯಾಗುತ್ತದೆ.
एतद् विमुक्तिसोपानमेतत् कालस्य वञ्चनम् ।
यद्व्यावृत्तं मनो भोगादासक्तं परमात्मनि ॥೫||
ಈ ಗೋರಕ್ಷಶತಕವು ಮುಕ್ತಿಗೆ ಸೋಪಾನವಾಗಿದ್ದು ಕಾಲ ಮೃತ್ಯುಮಿಗೆ ವಂಚನೆಯಾಗುತ್ತದೆ
This Gorakshanatha is stepping stone to emancipation and defeater of effects of kala
द्विजसेवितशाखस्य श्रुतिकल्पतरोः फलम् ।
शमनं भवतापस्य योगं भजत सत्तमाः ॥ ६ ॥
Veda is Kalpataru. As branches are refuge to birds, scholars take refuge in veda.
This Kalpataru's fruit is "yoga". Oh, aspirants of truth.. worship this.
This resolves physiological, environmental and spiritual impediments.
ವೇದವು ಕಲ್ಪತರುವಾಗಿದೆ. ಅದರ ಶಾಖೆಯಲ್ಲಿ ಪಕ್ಷಿಗಳ ಆಶ್ರಯವಿರುವಂತೆ ಪಂಡಿತ ವಿದ್ವಾಂಸರ ಮೂಲಕ
ವೇದದ ಶಾಖೆಗಳು ಮತ್ತು ಉಪಶಾಖೆಗಳ ಪರಿಚಯವಾಗುವಂತೆ, ವೇದರೂಪಿ ಕಲ್ಪತರುವಿನ ಫಲವು ಯೋಗವಾಗಿದೆ.
ಹೇ, ಸತ್ಪುರುಷರೇ, ಇದನ್ನು ಆಚರಿಸಿರಿ. ಇದು ಆಧಿದೈಹಿಕ, ಆದಿಭೌತಿಕ ಹಾಗೂ ಆಧಿದೈವಿಕ ತಾಪಗಳನ್ನು ಶಮನಗೊಳಿಸುವುದು.
आसनं प्राणसंरोधः प्रत्याहारश्च धारणा ।
ध्यानं समाधिरेतानि योगाङ्गानि वदन्ति षट् ॥ ७ ॥
posture, regulation of breath,internalization of the senses towards their source,
concentration, meditation and absorption of consciousness in the self - are the six limbs of yoga
ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ಯೋಗದ ಆರು ಅಂಗವೆಂದು ಹೇಳಲಾಗುತ್ತದೆ.
आसनानि च तावन्ति यावन्तो जीवजातयः।
एतेषामखिलान् भेदान् विजानाति महेश्वरः||८||
There are as many postures as there are creatures. Maheswara knows all those postures.
ಎಷ್ಟು ಪ್ರಕಾರದ ಜೀವರಾಶಿಗಳಿವೆಯೋ ಅಷ್ಟೇ ಪ್ರಕಾರದ ಆಸನಗಳಿರುತ್ತವೆ. ಆ ಎಲ್ಲ ಪ್ರಕಾರಗಳನ್ನು ಶಿವನೇ ಅರಿತಿದ್ದಾನೆ.
चतुरशीतिलक्षणामेकैकं समुदाहृतम् ।
ततः शिवेन पीठानां षोडशोनं शतं कृतम्||९||
He has explained every one of the eighty-four lakh postures.
Of them, Lord Shiva has said that for every one lakh (posture), only eighty-four postures
are important.
ಎಂಭತ್ನಾಲ್ಕು ಲಕ್ಷ ಆಸನಗಳಲ್ಲಿ ಪ್ರತಿಯೊಂದನ್ನು ಚೆನ್ನಾಗಿ ಬಣ್ಣಿಸಿದ್ದಾನೆ. ಅವುಗಳಲ್ಲಿ ಶಿವನು
ಒಂದು ಲಕ್ಷಕ್ಕೊಂದರಂತೆ ಕೇವಲ ಎಂಬತ್ನಾಲ್ಕು ಆಸನಗಳು ಮುಖ್ಯವೆಂದು ಹೇಳಿದ್ದಾನೆ.
आसनेभ्यः समस्तेभ्यो द्वयमेतदुदाहृतम् ।
एक सिद्धासनं तत्र द्वितीयं कमलासनम् ॥१०||
Of all the eighty-four postures, only two are the most important:
one is *Siddhasana*, the other is Kamalasana (*Padmasana*)
ಆ ಎಲ್ಲ ಎಂಭತ್ನಾಲ್ಕು ಆಸನಗಳಲ್ಲಿ ಕೇವಲ ಎರಡು ಅತಿ ಪ್ರಮುಖವಾಗಿದೆಯೆಂದು ಹೇಳುತ್ತಾನೆ:
ಒಂದು *ಸಿದ್ಧಾಸನ*ವಾದರೆ, ಇನ್ನೊಂದು ಕಮಲಾಸನ (*ಪದ್ಮಾಸನ*)ವಾಗಿದೆ.
योनिस्थानकमझिमूलघटितं कृत्वा दृढं विन्यसेन्
मेढ़े पादमथैकमेव नियतं कृत्वा समं विग्रहम् ।
स्थाणुः संयमितेन्द्रियोऽचलदृशा पश्यन् भ्रुवोरन्तर-
मेतन्मोक्षकवाट भेदजनकं सिद्धासनं प्रोच्यते ॥११||
The space between the anus and gonads is the position of the kundalini.
The yogi (gently) pressing this space with the left heel and pressing the heel of the right foot onto
the gonads, keeping the body up and keeping the senses in check, stabilizing the eyes at glabella,
if sits stable, opens the door of emancipation.
ಗುದ ಮತ್ತು ಮೇಢದ ಮಧ್ಯದಲ್ಲಿರುವ ಯೋನಿಯು ಕುಂಡಲಿನಿ ಸ್ಥಾನವಾಗಿದೆ. ಯೋಗಿಯು ಈ ಯೋನಿಸ್ಥಾನವನ್ನು ಎಡಗಾಲಿನ
ಹಿಮ್ಮಡಿಯಿಂದ ಒತ್ತಿ ಹಿಡಿದು, ಬಲಗಾಲಿನ ಹಿಮ್ಮಡವನ್ನು ಮೇತ್ರದ ಮೇಲೆ ಒತ್ತಿ ಇಟ್ಟು, ಶರೀರವನ್ನು ನೆಟ್ಟಗೇ ಇಟ್ಟುಕೊಂಡು,
ಸಕಲೇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡು ಭೂಮಧ್ಯದಲ್ಲಿ ದೃಷ್ಟಿಯನ್ನು ಸ್ಥಿರಗೊಳಿಸಿಕೊಂಡು ಅಲುಗಾಡದೇ ಕುಳಿತರೆ ಇದೇ
ಮೋಕ್ಷದ ಬಾಗಿಲನ್ನು ತೆರೆಯುವ ಸಿದ್ಧಾಸನವಾಗಿದೆ.
वामोरूपरि दक्षिणञ्च चरणं संस्थाप्य वामं तथा
दक्षोरूपरि पश्चिमेन विधिना धृत्वा कराभ्यां दृढम् ।
अङ्गुष्ठौ हृदये निधाय चिबुकं नासाग्रमवलोकये
देतद्व्याधि विकारनाशनकरं पद्मासनं प्रोच्यते||१२||
Keep the right leg on the left thigh, the left leg on the right thigh. Bringing the
thumb of the foot back and forth and holding it tight with both hands, the chin
should be thrust into the heart and focus to be on the tip of the nose. This is
padmasana, the seat of the elimination of all the ailments of the yogis
practicing as samyamis.
ಎಡ(ಗಾಲಿನ) ತೊಡೆಯ ಮೇಲೆ ಬಲಗಾಲನ್ನು, ಬಲ ತೊಡೆಯ ಮೇಲೆ ಎಡಗಾಲನ್ನು ಇಟ್ಟು ಕಾಲುಗಳ ಹೆಬ್ಬೆರಳುಗಳನ್ನು
ಹಿಂದಿನಿಂದ (ವಿರುದ್ಧವಾಗಿ) ತಂದು ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡು, ಗದ್ದವನ್ನು
ಹೃದಯದತ್ತ ನೂಕಬೇಕು. ಮೂಗಿನ ತುದಿಯ ಮೇಲೆ ದೃಷ್ಟಿಯನ್ನು ಕೇಂದ್ರಿಕರಿಸಬೇಕು, ಸಂಯಮಿಗಳಾಗಿ
ಆಚರಿಸುವ ಯೋಗಿಗಳ ವ್ಯಾಧಿಗಳನ್ನೆಲ್ಲ ನಿರ್ಮೂಲನೆಗೊಳಿಸುವ ಈ ಆಸನಕ್ಕೆ ಪದ್ಮಾಸನವೆನ್ನುವರು.
षट्चक्रं षोडशाधारं त्रिलक्ष्यं व्योमपञ्चकम् ।
स्वदेहे ये न जानन्ति कथं सिद्ध्यन्ति योगिनः ॥१३||
How can a yogi achieve siddhi, if he doesn't discern, his own body's *six chakras*
(muladha, swadhistana, manipura, anahata, vishudhi and ajna), *sixteen support systems*
(padangushta, muladhara, gudadhara, medhradhara, uddiyana bandhadara, nabhadhar,
hrudayadhara, kandadhara, ghantika / jihvamuladhara, talvadhara, jihvadhara, bhoomadhara,
kachatachadhara throgh the nose, lalatadhara & brahmarandradara), *three goals* (internal,
intermittent and external), *five spaces* (akasha, parakasha, mahakasha, tatvakasha and
suryakasha).
ತನ್ನ ಶರೀರದಲ್ಲಿರುವ ಮೂಲಾಧಾರ, ಸ್ವಾಧಿಷ್ಠಾನ ಮಣಿಪೂರ, ಅನಾಹತ, ವಿಶುದ್ಧ ಹಾಗೂ ಆಜ್ಞಾ- ಷಟ್‌ಚಕ್ರಗಳನ್ನು;
ಪಾದಾಂಗುಷ್ಠ, ಮೂಲಾಧಾರ, ಗುದಾಧಾರ, ಮೇಢ್ರಾಧಾರ, ಉಡ್ಡಿಯಾನ ಬಂಧಾದಾರ, ನಾಭ್ಯಾಧಾರ, ಹೃದಯಾಧಾರ,
ಕಂದಾಧಾರ, ಘಂಟಿಕಾ ಅಥವಾ ಜಿಹ್ವಾಮೂಲಾಧಾರ, ತಾಲ್ವಾಧಾರ, ಜಿಹ್ವಾಧಾರ, ಭೂಮಧಾರ, ನಾಸಾ ಮೂಲಕ ಕಚಾಟಾಚಾಧಾರ,
ಲಲಾಟಾಧಾರ, ಬ್ರಹ್ಮಾರಂಧ್ರಾಧಾರ ಹದಿನಾರು ಆಧಾರಗಳನ್ನು; ಆಂತರಿಕ, ಮಧ್ಯ ಮತ್ತು ಬಾಹ್ಯ ತ್ರಿಲಕ್ಷ್ಯಗಳನ್ನು; ಆಕಾಶ,
ಪರಾಕಾಶ, ಮಹಾಕಾಶ, ತತ್ವಾಕಾಶ ಹಾಗೂ ಸೂರ್ಯಾಕಾಶವೆಂಬ ಪಂಚಯ್ಯೋಮಗಳನ್ನು; ಯಾರು ಅರಿಯವುದಿಲ್ಲವೋ
ಅವರು ಯಾವ ರೀತಿಯಿಂದ ಸಿದ್ಧಿಯನ್ನು ಪಡೆಯುವರು? ಅಥವಾ ಯೋಗ ಸಿದ್ಧರಾಗುವರು?
एकस्तम्भं नवद्वारं गृहं पञ्चाधिदैवतम् ।
स्वदेहं ये न जानन्ति कथं सिद्ध्यन्ति योगिनः ॥१४||
How can a yogi achieve siddhi, if he doesn't discern, his own body's is from - *mind*,
*nine gateways* (one mouth, two eyes, two ears, two nostrils, one genitalia and one anal),
*five elements* (solid, liquid, fire, gas and space)
(ಯೋಗಿಯು ಶರೀರದಲ್ಲಿರುವ) ಶರೀರರೂಪಿ ಗೃಹವು ಒಂದು ಮನಸ್ಸು: ಒಂಭತ್ತು ದ್ವಾರ ಒಂದು ಬಾಯಿ, ಎರಡು ನೇತ್ರ,
ಎರಡು ಕಿವಿಗಳು, ಎರಡು ಹೊರಳೆಗಳು, ಒಂದು ಉಪಸ್ಥ (ಜನನೇಂದ್ರಿಯ) ಹಾಗೂ ಒಂದು ಗುದವೆಂಬ ನವ್ವಾರಗಳನ್ನು;
ಪೃಥ್ವಿ ಜಲ, ತೇಜ, ವಾಯು ಮತ್ತು ಆಕಾಶವೆಂಬ ಪಂಚ ಅಧಿದೈವತದಿಂದ ನಿರ್ಮಿತವಾಗಿದೆ ಎಂಬುದನ್ನು ಅರಿಯದ
ಯೋಗಿಯು ಯಾವ ತರಹದ ಯೋಗಸಿದ್ಧಿಯನ್ನು ಪಡೆಯುವರು?
चतुर्दलं स्यादाधारः स्वाधिष्ठानं च षट्दलम् ।
नाभौ दशदलं पद्मं सूर्यसंख्या दलं हृदि ॥ १५||
Muladhara is represented by four petal lotus; swadhinata by six petal lotus;
manipura by ten petal lotus; anahata by twelve petal lotus.
ಮೂಲಾಧಾರ ಚಕ್ರವು ನಾಲ್ಕು ದಳವುಳ್ಳ ಕಮಲವಾಗಿದೆ; ಸ್ವಾಧಿಷ್ಠಾನ ಚಕ್ರವು
ಆರು ದಳವುಳ್ಳ ಕಮಲವಾಗಿದೆ; ನಾಭಿಯಲ್ಲಿರುವ ಮಣಿಪೂರ ಚಕ್ರವು ಹತ್ತುದಳವುಳ್ಳ ಕಮಲವಾಗಿದೆ;
ಹೃದಯದಲ್ಲಿರುವ ಅನಾಹತ ಚಕ್ರವು ಹತ್ತು (ಹನ್ನೆರಡು) ದಳವುಳ್ಳ ಕಮಲವಾಗಿದೆ
कण्ठे स्यात् षोडशदलं भ्रूमध्ये द्विदलं तथा ।
सहस्रदलमाख्यातं ब्रह्मरन्ध्रे महापथे ॥೧೬॥
Vishudhi is represented by sixteen petal lotus; Ajna by two petal lotus; and Sahasrara which
is the highway to brahmarandhra is represented by thousand petal lotus.
ಕಂಠದಲ್ಲಿರುವ ವಿಶುದ್ಧ (ದ್ವಿ) ಚಕ್ರವು ಹದಿನಾರು ದಳವುಳ್ಳ ಕಮಲವಾಗಿದೆ; ಭ್ರೂಮಧ್ಯ ಸ್ಥಾನದಲ್ಲಿರುವ ಆಜ್ಞಾಚಕ್ರವು ಎರಡು
ದಳವುಳ್ಳ ಕಮಲವಾಗಿದೆ ಮತ್ತು ಬ್ರಹ್ಮರಂಧ್ರದ ಮಹಾಪಥದಲ್ಲಿರುವ ಸಹಸ್ರದಳವುಳ್ಳ ಕಮಲವು ಸಹಸ್ರಾರವಾಗಿದೆ.
आधारः प्रथमं चक्रं स्वाधिष्ठानं द्वितीयकम् ।
योनिस्थानं द्वयोर्मध्ये कामरूपं निगद्यते ॥१७||
The first is “muladhara chakra”. The second is “swadhishtana chakra”. The space in between
the two chakras is called 'kamarupa'.
ಮೊದಲನೆಯದು ಮೂಲಾಧಾರ ಚಕ್ರವಾಗಿದೆ. ಎರಡನೆಯದು ಸ್ವಾಧಿಷ್ಠಾನ ಚಕ್ರವಾಗಿದೆ. ಇವೆರಡು ಚಕ್ರಗಳ
ಮಧ್ಯದಲ್ಲಿರುವ ಯೋನಿಸ್ಥಾನಕ್ಕೆ 'ಕಾಮರೂಪ'' ವೆಂದೆನ್ನಲಾಗುತ್ತದೆ.
आधाराख्यं गुदास्थानं पङ्कजं च चतुर्दलम् ।
तन्मध्ये प्रोच्यते योनिः कामाक्षा सिद्धवन्दिता ॥१८||
Muladhara represented by four-petal lotus is in the rectum, with the triangular space facing the
spinal cord. This yoga is a pedestal called 'Kamakhya or Kamaksha' saluted by Siddha.
ಮೂಲಾಧಾರವೆಂಬ ನಾಲ್ಕು ದಳದ ಕಮಲವು ಗುದಸ್ಥಾನದಲ್ಲಿರುವುದು, ಮಧ್ಯದಲ್ಲಿ ಸುಷುಮ್ಮಾ ಮುಖಿಯಾದ ತ್ರಿಕೋನಾಕಾರದ
ಯೋನಿಯು ಇರುತ್ತದೆ. ಈ ಯೋಗವು ಸಿದ್ಧರಿಂದ ವಂದಿತವಾದ 'ಕಾಮಾಖ್ಯಾ ಅಥವಾ ಕಾಮಾಕ್ಷಾ' ಎಂಬ ಹೆಸರಿನ ಪೀಠವಾಗಿದೆ.
योनिमध्ये महालिङ्ग पश्चिमाभिमुखस्थितम् ।
मस्तके मणिवद् बिम्बम् यो जानाति स योगवित् ॥१९||
In the middle of the space is a large face of the Mahalinga; the "Yogasiddha" or "Yogavetta" is familiar with this beacon-like image.
ಈ ಕಾಮಾಖ್ಯಾ ಯೋನಿಯ ಮಧ್ಯದಲ್ಲಿ ಪಶ್ಚಿಮಾಭಿಮುಖವಾದ ಮಹಾಲಿಂಗವು ಇರುವುದು, ಅದರ ಮಸ್ತಕದಲ್ಲಿ ಮಣಿಯಂಥ ಪ್ರದೀಪವಾದ ಬಿಂಬವನ್ನು ಚೆನ್ನಾಗಿ ಅರಿತವರೇ “ಯೋಗಸಿದ್ಧ” ಅಥವಾ “ಯೋಗವೇತ್ತಾ” ಆಗುವರು.
तप्त चामीकराभासं तडिल्लेखेव विस्फुरत् ।
त्रिकोणं तत्पुरं वह्नेरधोमेढ़ात् प्रतिष्ठितम् ॥ २०||
The space beneath gonads, in mooladhara lotus’ whorl, is represented by a fiery, golden &
lightning like triangle.
ಲಿಂಗಸ್ಥಾನದ ಕೆಳಗೆ ಮೂಲಾಧಾರ ಪದ್ಮದ ಕರ್ಣಿಕೆಯಲ್ಲಿ - ತಪ್ತ (ಕಾಯ್ದ) ಸ್ವರ್ಣವರ್ಣ ಮತ್ತು ವಿದ್ಯುಲ್ಲೇಖೆಯಂಥ
ಜ್ಯೋತಿರ್ಯುಕ್ತ ತ್ರಿಕೋಣಾಕಾರ ಅಗ್ನಿಮಯ ಯೋನಿಸ್ಥಾನವಿರುವದು
यत्समाधौ परं ज्योतिरनन्तं विश्वतो मुखम् ।
तस्मिन्दष्टे महायोगे यातायातं न विद्यते ।|२१||
By observing this endless universal divine light in a state of higher meditation, yogi is
emancipated.
ಅನಂತವಾದ ವಿಶ್ವತೋಮುಖವಾದ (ಈ ಕಾಲಾಗ್ನಿನಿರೂಪಿ) ಪರಮ ಜ್ಯೋತಿಯ ಸಮಾಧಿಯಲ್ಲಿಯ ಮಹಾಯೋಗದಲ್ಲಿದ್ದು
ಈ ಪರಮಜ್ಯೋತಿ ದರ್ಶನ ಪಡೆದು ಯೋಗಿಯು ಆವಾಗಮನ (ಬರುವ ಹೋಗುವ) ದ ಬಂಧನದಿಂದ ಮುಕ್ತನಾಗುತ್ತಾನೆ.
स्वशब्देन भवेत्प्राणः स्वाधिष्ठानं तदाश्रयः ।
स्वाधिष्ठानात् पदादस्मान् मेढ्रमेवाभिधीयते ॥२२||
The syllable “Swa” is prana’s excitation. Swadhishtana chakra is the place of prana and hence
swadhishtana is also caled “medhra”.
'ಸ್ವ' ಎಂಬ ಶಬ್ದವು ಪ್ರಾಣದ ಉದ್ಗಮವಾಗಿದೆ. ಸ್ವಾಧಿಷ್ಠಾನವೇ ಪ್ರಾಣದ ಆಶ್ರಯಸ್ಥಾನವಾಗಿದೆಯಾದ್ದರಿಂದಲೇ ಸ್ವಾಧಿಷ್ಠಾನ ಪದಕ್ಕೆ
ಮೇಢ್ರವೆಂದೆನ್ನುವರು.
तन्तुना मणिवत्प्रोतो यत्र कन्दः सुषुम्णया ।
तन्नाभिमण्डलं चक्रं प्रोच्यते मणिपूरकम् ॥ २३||
Like a holed perl, “sushumna”’s central point is situation in the gonads. The depression in the
realm of navel is the location of “manipura chakra”
ಇಲ್ಲಿ ದಾರದಲ್ಲಿ ಪೋಣಿಸದ ಮಣಿಯ ತರಹ ಸುಷುಮ್ನಾ ನಾಡಿಯ ಕೇಂದ್ರವಿರುತ್ತದೆ. ನಾಭಿ ಮಂಡಲದಲ್ಲಿರುವ ಕಂದಕ್ಕೆ
ಮಣಿಪೂರಕ ಚಕ್ರವೆಂದು ಕರೆಯಲಾಗುತ್ತದೆ. (ಇದು ಹತ್ತು ದಳಗಳುಳ್ಳ ಕಮಲವಾಗಿದೆ)
द्वादशारे महाचक्रे पुण्यपापविवर्जिते ।
तावज्जीवो भ्रमत्येव यावत्तत्त्वं न विन्दति ।।२४||
Anahata chakra represented by twelve petal lotus is devoid of merits & demerits. Until jeevatma
is roaming in the cycle of birth & death and until he does not attain knowledge of ultimate truth
(in anahata chakra), he cannot realize brahman.
ಹನ್ನೆರಡು ದಳಗಳುಳ್ಳ ಮಹಾಚಕ್ರವು ಆನಾಹತ, ಚಕ್ರವಾಗಿದ್ದು ಪಾಪಪುಣ್ಯಗಳಿಂದ ರಹಿತವಾಗಿದೆ. ಎಲ್ಲಿಯವರೆಗೆ (ಸಂಸಾರಬಂಧನದಲ್ಲಿ
ಜೀವಾತ್ಮನು ಭ್ರಮಿಸುತ್ತಿರುತ್ತಾನೆಯೋ, ಎಲ್ಲಿಯವರೆಗೆ (ಈ ಚಕ್ರದಲ್ಲಿ ಧ್ಯಾನಸ್ಥನಾಗಿ) ಪರಮತತ್ವ-ಪರಮಾತ್ಮನ ಜ್ಞಾನ ಪ್ರಾಪ್ತಿ
ಮಾಡಿಕೊಳ್ಳಲಾರನೋ ಅಲ್ಲಿಯವರೆಗೆ ಪರಮಾತ್ಮನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲಾರನು.
ऊर्ध्वं मेढ़ादधोनाभेः कन्दयोनिः खगाण्डवत्।
तत्रना : समुत्पन्नाः सहस्राणां द्विसप्ततिः॥२५||
On gonads and below the navel is a space like bird's egg. It is the output position of 72000
pulses.
ಮೇಢ್ರದ ಮೇಲೆ ಮತ್ತು ನಾಭಿಯ ಕೆಳಗೆ ಪಕ್ಷಿಯ ಅಂಡದಂಥ - ತತ್ತಿಯಂಥ ಕಂದಯೋನಿಯಿರುವುದು. ಅಲ್ಲಿ 72000 ನಾಡಿಗಳ
ಉತ್ಪತ್ತಿ ಸ್ಥಾನವಿದೆ.
तेषां नाडीसहस्रेषु द्विसप्ततिरुदाहृताः ।
प्रधानं प्राणवाहिन्यो भूयस्तासु दशस्मृताः ।।२६||
Out of these channels, 72 channels of energy are important and out of them ten are very important
channels of life energy
ಈ ಸಹಸ್ರ ನಾಡಿಗಳಲ್ಲಿ 72 ನಾಡಿಗಳು ಪ್ರಧಾನವಾಗಿದ್ದು ಅದರಲ್ಲಿಯ ಹತ್ತು ನಾಡಿಗಳು ಪ್ರಾಣವಾಹಿನಿಯ ಪ್ರಮುಖವಾಗಿವೆ.
इडा च पिङ्गला चैव सुषुम्णा च तृतीयका ।
गान्धारी हस्तिजिह्वा च पूषा चैव यशस्विनी ।। २७||
अलम्बुषा कुहूश्चैव शखिनी दशमी स्मृता ।
एतन्नाडीमयं चक्रं ज्ञातव्यं योगिभिः सदा ॥ २८||
First channel of energy is “ida”, second is “pingala”, third is “sushumna” and the rest are “gandhari”,
“hastijihwa”, “poosha”, “yashswini”, “alambusha”, “kuhu” and “shankhini”; yogis shall discern chakras
consisting these channels of energy.
ಇಡಾ ಮೊದಲನೆಯದ್ದು, ಪಿಂಗಲಾ-ಎರಡನೆಯದ್ದು, ಸುಷುಮ್ಮ-ಮೂರನೆಯ ನಾಡಿಯಾಗಿದೆ, ಗಾಂಧಾರೀ, ಹಸ್ತಜಿಹ್ವಾ, ಪೂಷಾ,
ಯಶಸ್ವಿನೀ, ಅಲಂಬುಷಾ, ಕುಹೂ ಮತ್ತು ಶಂಖಿನೀ ಉಳಿದ ನಾಡಿಗಳಾಗಿವೆ; ಯೋಗಿಗಳು ಈ ನಾಡಿಗಳಿಂದ ಕೂಡಿದ ಚಕ್ರವನ್ನು ಸದಾ
ತಿಳಿಯಬೇಕಾಗುತ್ತದೆ.
इडा वामे स्थिता भागे पिङ्गला दक्षिणे स्थिता ।
सुषुम्णा मध्य देशे तु गान्धारी वामचक्षुषि ।|२९||
“Ida” (channel of energy) is located on the left side of the nose and “pingala” on the right side.
Between these two, “sishumna” is located. “Gandhari” (channel of energy) is located in left eye.
ಮೂಗಿನ ಎಡಭಾಗದಲ್ಲಿ ಇಡಾ ಮತ್ತು ಬಲಭಾಗದಲ್ಲಿ ಪಿಂಗಳಾ ನಾಡಿಯಿರುತ್ತದೆ. ಇವೆರಡರ ಮಧ್ಯದಲ್ಲಿ ಸುಷುಮ್ನಾ ನಾಡಿಯಿರುತ್ತದೆ.
ಗಾಂಧಾರಿ ನಾಡಿಯು ಎಡ ಕಣ್ಣಿನಲ್ಲಿ (ಇರುತ್ತದೆ).
दक्षिणे हस्तिजिह्वा च पूषा कर्णे च दक्षिणे ।
यशस्विनी वामकर्णे ह्यानने चाप्यलम्बुषा |।३०||
“Hastijihva” (channel of energy) is located in right eye, “poosha” in right ear, “yasaswini” in left ear
and “alambusha” in the mouth.
ಹಸ್ತಜಿಹ್ವಾ ನಾಡಿಯು ಬಲಕಣ್ಣಿನಲ್ಲಿ ಇರುತ್ತವೆ. ಪೂಷಾ ನಾಡಿಯು ಬಲಕಿವಿಯಲ್ಲಿ ಯಶಸ್ವಿನೀ ನಾಡಿ ಎಡಕಿವಿಯಲ್ಲಿರುತ್ತವೆ.
ಅಲಂಬುಷಾ ವೆಂಬುದು ಬಾಯಿಯಲ್ಲಿರುತ್ತದೆ
कुहूश्च लिङ्गदेशे तु मूलस्थाने च शंखिनि ।
एवं द्वारं समाश्रित्य तिष्ठन्ति दशनाडिकाः ॥ ३१||
“Kuhoo” (channel of energy) is located in the gonads and “shankhini” is in muladhara. In this fashion,
ten channels of energy are located in these ten gateways.
ಕುಹೂ ನಾಡಿಯು ಲಿಂಗದೇಶ (ಸ್ಥಾನದಲ್ಲಿ) ದಲ್ಲಿ ಮತ್ತು ಶಂಖಿನೀ ನಾಡಿಯು ಮೂಲಸ್ಥಾನದಲ್ಲಿ ಅಂದರೆ ಮೂಲಾಧಾರದಲ್ಲಿ
ಸ್ಥಿರವಾಗಿರುತ್ತದೆ, ಈ ರೀತಿ ಹತ್ತು ನಾಡಿಗಳು ಪ್ರಾಣವಾಯುವಿನ ದ್ವಾರದಲ್ಲಿ ಸಮಾಶ್ರಿತವಾಗಿ ಈ ಸ್ಥಿತವಾಗಿ ಇರುತ್ತವೆ.
इडा पिङ्गला सुषुम्णा च प्राणमार्गे समाश्रिताः।
सततं प्राणवाहिन्यः सोमसूर्याग्निदेवताः ।|३२||
Ida, pingala and sushumana are located in the pathways of “prana” (life energy). They
continuously channelize the flow of life energy and are represented by deities “chandra”, “surya”
and “agni”
ಇಡಾ, ಪಿಂಗಳಾ ಹಾಗೂ ಸುಷುಮ್ಮಾಗಳು ಪ್ರಾಣಾಮಾರ್ಗದಲ್ಲಿ ಸ್ಥಿತವಾಗಿರುತ್ತವೆ. ಇವು ಸದಾ ಶರೀರದಲ್ಲಿ ಪ್ರಾಣ ಸಂಚಾರ
ಮಾಡುತ್ತಿರುತ್ತವೆ. ಇವುಗಳಿಗೆ ಅನುಕ್ರಮವಾಗಿ ದೇವತೆಗಳಾದ ಚಂದ್ರ, ಸೂರ್ಯ ಹಾಗೂ ಅಗ್ನಿಗಳು ದೇವತೆಗಳಾಗಿರುತ್ತವೆ.
प्राणोऽपानः समानश्चोदानव्यानौ च वायवः ।
नागः कूर्मोऽथ कृकरो देवदत्तो धनञ्जयः ॥३३||
Ten dimensions of air inside our body are called: prana, apana, samana, udana, vyana, naga, kurma, krkara, devadatta and Dhananjaya.
ಶರೀರದಲ್ಲಿ ಪ್ರಾಣ, ಅಪಾನ, (ಸಮಾನ,) ಉದಾನ, ವ್ಯಾನ, ನಾಗ, ಕೂರ್ಮ, ಕೃಕರ, ದೇವದತ್ತ ಹಾಗೂ ಧನಂಜಯಗಳೆಂಬ ಹತ್ತು ವಾಯುಗಳಿರುತ್ತದೆ.
हृदि प्राणो वसेन्नित्यं अपानो गुदमण्डले |
समानो नाभिदेशे स्याद् उदानः कण्ठमध्यगः ॥३४||
ಪ್ರಾಣವು ಹೃದಯದಲ್ಲಿ ನಿತ್ಯವಾಸವಾಗಿರುತ್ತದೆ. ಅಪಾನವು ಗುದಮಂಡಲದಲ್ಲಿ, ಸಮಾನವು ನಾಭಿಪ್ರದೇಶದಲ್ಲಿ, ಉದ್ಯಾನವು ಕಂಠದೇಶದ
ಮಧ್ಯದಲ್ಲಿ (ವ್ಯಾಪ್ತವಾಗಿರುತ್ತದೆ).
“Prana” is located in heart; “apana” in anus; “samana” in the real of navel; “udana” at the centre of
throat.
व्यानो व्यापी शरीरे तु प्रधानाः पञ्चवायवः |
प्राणाद्याश्चात्र विख्याता नागाद्याः पञ्चवायवः ॥३५||
“Vyana” is located in entire body. Since “prana” is located in heart “prana, apapana, vyana, udana &
samana” are the *five prime dimensions of air*. “Naga” and others (“kurma, krkara, devadatta and
Dhananjaya”) are the *five subordinate dimensions of air*.
ಮತ್ತು ವ್ಯಾನವು ಸಂಪೂರ್ಣ ಶರೀರದಲ್ಲಿ ವ್ಯಾಪ್ತವಾಗಿರುತ್ತದೆ. ಪ್ರಾಣವು ಹೃದಯದಲ್ಲಿ ನಿತ್ಯವಾಸವಾಗಿರುತ್ತವೆಯಾದ್ದರಿಂದ ಪ್ರಾಣಾದಿ
ಪಂಚವಾಯುಗಳು ಪ್ರಧಾನವೆಂದು ಹೇಳಲಾಗಿದ್ದು, ನಾಗಾದಿಗಳು ಉಪವಾಯುಗಳಾಗಿವೆ.
उद्गारे नाग आख्यातः कूर्म उन्मीलने स्मृतः |
कृकरः क्षुतकृज्ज्ञेयो देवदत्तो विजृम्भणे ॥३६||
“Naga” dimension of air (inside our body) *"Naga"
dimension of air (in our body) facilitates
interjection; "kurma" facilitates blinking; "krkara"
facilitates sneezing; "devadatta" facilitates
yawning.*
ನಾಗವಾಯುವು ಉದ್ಗಾರ (ಡ ಕಾರ) ವನ್ನುಂಟುಮಾಡುವದು.
ಕೂರ್ಮವಾಯುವು ಕಣ್ಣಿನ ರೆಪ್ಪೆಗಳನ್ನು ತೆರೆಯುಂತ-
ಮುಚ್ಚುವಂತೆ ಮಾಡುತ್ತದೆ, ಕೃಕರ ವಾಯುವಿನಿಂದ ಸೀನುವಿಕೆ
ಉಂಟಾಗುತ್ತದೆ. ದೇವದತ್ತವು ಆಕಳಿಕೆಯನ್ನು ತರುವದು.
न जहाति मृतं चापि सर्वव्यापि धनञ्जयः ।
एते सर्वासु नाडीषु भ्रमन्ते जीवरूपिणः ॥३८||
“Dhananjaya” dimension of air is spread across the human body and it stays in the body upto four
hours after death. These ten dimensions representing life energy circulates in all channels of energy
in the human body.
ಧನಂಜಯವು ಪೂರ್ಣ ಶರೀರದಲ್ಲಿ ವ್ಯಾಪ್ತವಾಗಿರುವುದು. ಶರವು ಮೃತವಾದ ಮೇಲೆ ನಾಲ್ಕು ಗಂಟೆಗಳವರೆಗೆ ಶರೀರವನ್ನು
ತೊರೆಯಲಾರದು. ಜೀವರೂಪಿಯಾದ ಈ ದಶವಾಯುಗಳು ಶರೀರದ ಸಕಲ ನಾಡಿಗಳಲ್ಲಿ ಭ್ರಮಣ ಮಾಡಿ ಪ್ರಾಣದ
ಸಂಚಾರವನ್ನು ಮಾಡುತ್ತಿರುತ್ತವೆ.
आक्षिप्तो भुजदण्डेन यथोच्छलति कन्दुकः|
प्राणापानसमाक्षिप्तस्तथा जीवो न तिष्ठति ॥ ३८||
Like a ball bounces after being thrown, file energies also bounce up and down due to the influence of
“prana” & “apana”
ಕೈಯಿಂದ ಚಂಡನ್ನು ಹೊಡೆದಾಗ ಮೇಲೆ ಪುಟಿಯುವಂತೆ ಜೀವವು ಪ್ರಾಣ ಮತ್ತು ಅಪಾನದಿಂದ
ಆಹತಗೊಂಡು ಸದಾ ಸಂಚಾರಗೈಯತ್ತಿರುತ್ತದೆ. ( ಒಬ್ರುಸುವುದಿಲ್ಲ)
प्राणापानवशो जीवो हृधश्चोध्ध्वं च धावति ।
वामदक्षिणमार्गेण चञ्चलत्वान्न दृश्यते ॥ ३९||
Life energy, under the control of _prana_ & _apana_ , keeps bouncing up and down - influenced
by the inhalation & exhalation via _ida_ and _pingala_. Hence remains undetected (to average
human).
ಯಾಕೆಂದರೆ ಜೀವವು ಪ್ರಾಣ-ಅಪಾನಗಳ ಅಧೀನವಾಗಿರುವುದರಿಂದ ಇಡಾ-ಪಿಂಗಳಾಗಳ ಮೂಲಕ ಸೆಳೆದುಕೊಳ್ಳುವ
ಪ್ರಾಣದಿಂದ, ಹೊರದೂಡುವ ವಾಯುವಿನಿಂದ, ಅದು ಮೇಲೆ ಕೆಳಗೆ ಸಂಚರಿಸುತ್ತಿರುತ್ತದೆಯಾದ್ದರಿಂದ ಅದು ದೃಗ್ಗೋಚರವಾಗುವದಿಲ್ಲ.
रज्जुबद्धो यथा श्येनो गतौऽप्याकृष्यते पुनः ।
गुणवद्धस्तथा जीवः प्राणापानेन कृष्यते ॥४०||
As the bird flies being tied to a string, comes flying down when the string is pulled, the life energy
bound by satva, rajas and tamas, is controlled by prana & apana.
ದಾರದಲ್ಲಿ ಕಟ್ಟಿದ ವಾಜ ಗಿಡಗ (ಶ್ಯೇನ) ಪಕ್ಷಿಯು ಮೇಲೆ ಹಾರುವಂತೆ, ದಾರವನ್ನು ಜಗ್ಗಿದಾಗ ಕೆಳಗೆ ಬರುವಂತೆ ಜೀವವು ಸತ್ಯ ರಜಸ್
ಹಾಗೂ ತಮ-ಗುಣಗಳಿಂದ ಬದ್ಧವಾಗಿದ್ದು ಪ್ರಾಣ-ಅಪಾನ ವಾಯುಗಳಿಂದ ನಿಯಂತ್ರಣಗೊಳ್ಳುವುದು.
अपानः कर्षति प्राणं प्राणोऽपानं च कर्षति ।
ऊर्ध्वाध संस्थितावेतौ संयोजयति योगवित् ॥४१||
Prana & apana push & pull each other. The Yoga practitioner combines these two like the
combination of sun and moon.
ಆಪಾನವು ಪ್ರಾಣವನ್ನು ಮೇಲೆತ್ತುವುದು, ಅದರಂತೆ ಪ್ರಾಣವನ್ನು ಅಪಾನವನ್ನು ಮೇಲೆತ್ತುವುದು; ಯೋಗ ಪರಿಗಣಿತನು
ಇವೆರಡನ್ನು ಸೂರ್ಯ ಮತ್ತು ಚಂದ್ರರ ಮಿಲನದಂತೆ ಸಂಯೋಜಿಸುತ್ತಾನೆ.
हकारेण बहिर्याति सकारेण विशेत् पुनः ।
हँसहंसेत्यमुं मन्त्रं जीवो जपति सर्वदा ॥४२||
Life takes the breath out with subtle utterance 'ha'. And with 'sa' breathes in. In this way it is
constantly chanting the "hamsa" mantra.
ಜೀವವು 'ಹ' ಕಾರದಿಂದ ಉಸಿರನ್ನು ಹೊರಹಾಕುತ್ತದೆ. ಮತ್ತು 'ಸ' ಕಾರದಿಂದ ಒಳಗೆ ಎಳೆದುಕೊಳ್ಳುತ್ತದೆ. ಈ ತರಹ ಅದು
ಸದಾ ಹಂಸ-ಹಂಸ ಮಂತ್ರದ ಜಪ ಮಾಡುತ್ತಿರುತ್ತದೆ.
षटशतानित्वहारात्रे सहस्राण्येकविंशतिः ।
एतत्संख्यान्वितं मन्त्रं जीवो जपति सर्वदा ॥४३|
In this way life chants 21600 “hamsa mantra” in one day & night
ಈ ರೀತಿ ಜೀವವು ಒಂದು ದಿನ ರಾತ್ರಿಯಲ್ಲಿ 21 ಸಾವಿರ 6 ನೂರು 'ಹಂಸ' ಮಂತ್ರದ ಜಪ ಮಾಡುತ್ತದೆ.
अजपानाम गायत्री योगिनां मोक्षदायिनी|
अस्याः सङ्कल्पमात्रेण सर्वपापैः प्रमुच्यते ॥ ४४||
“Ajapa gayathri” is capable of emancipating yogis; just by resolving this chant, all sins are
removed.
ಅಜಪಾವೆಂಬ ಗಾಯತ್ರಿಯು ಯೋಗಿಗಳಿಗೆ ಮುಕ್ತಿಯನ್ನು ನೀಡುವದಾಗಿದೆ; ಈ ಗಾಯತ್ರಿಯನ್ನು ಸದಾ ಜಪಿಸುವ ಸಂಕಲ್ಪ
ಮಾತ್ರದಿಂದ ಸಕಲ ಪಾಪಗಳಿಂದ ಮುಕ್ತಿ ದೊರೆಯುತ್ತದೆ.
अनया सदृशी विद्या अनया सदृशो जपः |
अनया सदृशं ज्ञानं न भूतो न भविष्यति ॥ ४५||
There is no knowledge or chant greater than “ajapa gayatri”; never has been and never
will be
ಈ ಗಾಯತ್ರಿಗೆ ಸಮಾನವಾದುದು ಯಾವ ವಿದ್ಯೆಯಿಲ್ಲ, ಯಾವ ಜಪವಿಲ್ಲ, ಭೂತದಲ್ಲಿಲ್ಲ, ಭವಿಷ್ಯದಲ್ಲಿರುವುದಿಲ್ಲ.
कुण्डलिन्या समुद्भूता गायत्री प्राणधारिणी।
प्राणविद्या महाविद्या यस्तां वेत्ति योगवित् ॥४६||
“Ajapa gayatri” arising in kundalini is “pranadharini”, “prana vidya” and “maha vidya”. The
one who discerns this becomes expert in the yogic process.
ಕುಂಡಲಿನಿಯಲ್ಲಿ ಹುಟ್ಟಿದ ಈ ಗಾಯತ್ರಿ, ಪ್ರಾಧಾರಿಣೀ, ಪ್ರಾಣವಿದ್ಯಾ ಮಹಾವಿದ್ಯೆಯಾಗಿದೆ. ಇದನ್ನು ಅರಿಯುವವನು
ಯೋಗ ಪರಿಣಿತನಾಗುತ್ತಾನೆ.
कन्दोर्ध्वं कुण्डली शक्तिरष्टधा कुण्डलाकृतिः ।
ब्रह्मद्वारमुखं नित्यं मुखेनाच्छाद्य तिष्ठति ॥४७||
In hypogastrium region (below navel and just above gonad region), an annular shaped/ ring shaped -
source of all channels of life energy exists. This source (kundalini) is of eight types. It covers the door
of “brahma-randra”.
ಮೇಢ್ರದ ಮೇಲೆ ಮತ್ತು ನಾಭಿಯ ಕೆಳಗಿನ ಕಂದ ಸಮಾನದಲ್ಲಿ ಸಕಲ ನಾಡಿಗಳ ಉತ್ಪತ್ತಿ ಸ್ಥಾನವಿದ್ದು, ಕಂದದ ಮೇಲೆ ಕುಂಡಲಿನಿಶಕ್ತಿ
ಎಂಟು ಪ್ರಕಾರವಾಗಿದ್ದು, ಕುಂಡಲಿತ ಆಕಾರದಲ್ಲಿದ್ದು ಬ್ರಹ್ಮರಂಧ್ರದ (ಸುಷುಮ್ಮಾದಲ್ಲಿ ಇದ್ದ ಪಶ್ಚಿಮ) ದ್ವಾರವನ್ನು ತನ್ನ ಮುಖದಿಂದ
ಮುಚ್ಚಿಕೊಂಡಿರುತ್ತದೆ.
येन द्वारेण गन्तव्यं ब्रह्मस्थानमनामयम् ।
मुखेनाच्छाद्य तद्द्वारं प्रसुप्ता परमेश्वरी ॥४८||
The ascent through this door (of “brahma-randra”) leads to “brahma-sthana”. (However) this door
is closed by the latent “kundalini”.
ಈ ದ್ವಾರದಿಂದ ಮೇಲೇರುವ ಗತಿಯನ್ನು ನಿರ್ಮಲ, ನಿರ್ವಿಕಾರ, ಬ್ರಹ್ಮರಂಧ್ರ (ಬ್ರಹ್ಮಸ್ಥಾನ) ದಲ್ಲಿ ಪ್ರವೇಶಿಸಲಾಗುತ್ತದೆ.
ಆ ಬ್ರಹ್ಮದ್ವಾರದ ಮುಖದಿಂದ ಮುಚ್ಚಿಕೊಂಡ ಕುಂಡಲಿನಿ ಶಕ್ತಿಯು ಸುಪ್ತವಾಗಿರುತ್ತದೆ.
प्रबुद्धा वह्नियोगेन मनसा मरुता सह ।
सूचीवद् गुणमादाय व्रजत्यूर्ध्वं सुषुम्णया ॥४९||
By advanced practices of “vahni-yoga”, the Kundalini starts rising upwards, along with mind &
life energy, through the “sushumna” channel of energy.
ಅದು ವಹ್ನಿಯೋಗದಿಂದ ಜಾಗೃಗೊಂಡು ಮನ ಮತ್ತು ಪ್ರಾಣದ ಜೊತೆಗೆ ಮೇಲೇರುತ್ತದೆ.
प्ररस्फुरद भुजगाकारा पद्मतन्तुनिभा शुभा ।
प्रबुद्धा वन्हियोगेन व्रजत्यूर्ध्वं सुषुम्णया॥५0||
Serpent shaped kundalini shines like lotus fibre (lotus silk) and by advanced practices of
“vahni-yoga”, it rises upwards through the “sushumna” channel of energy
ಭುಜಂಗಾಕೃತಿಯ ಕುಂಡಲಿನಿಯು ಕಮಲ ತಂತುವಿನಂತೆ ಹೊಳೆಯುವ ಶುಭ ದೀಪದಂತಿರುತ್ತದೆ.
ಅದು ವಹ್ನಿಯೋಗದಿಂದ ಜಾಗೃಗೊಂಡು ಸುಷುಮ್ನಾ ಮೂಲಕ ಮೇಲೇರುತ್ತದೆ
उद्घाटयेत् कपाटं तु यथा कुञ्चिकया हठात् ।
कुण्डलिन्या तथा योगी मोक्षद्वारं प्रभेदयेत् ॥५१|
Like a key opening a cupboard, by yogi’s hatha yoga practice, kundalini opens the door of
emancipation.
ಸುಷುಮ್ಮಾ ಮಾರ್ಗದಿಂದ ಕೀಲಿಯು ತೆರೆಯುವಂತೆ ಕುಂಡಲಿನಿಯ ಮಹಾಶಕ್ತಿಯಿಂದ ಹಠಯೋಗದ
ಸಾಧನೆಯಲ್ಲಿ ತತ್ಪರನಾದ ಯೋಗಿಯು ಬ್ರಹ್ಮರಂಧ್ರದಲ್ಲಿಯ ಮೋಕ್ಷದ್ವಾರವನ್ನು ತೆರೆದು ಒಳಗೆ
ಪ್ರವೇಶಿಸುವನು.
कृत्वा सम्पुटितौ करौ दृढतरं बद्ध्वा तु पद्मासनं
गाढं वक्षसि सन्निधाय चिबुकं ध्यात्वा च तत्प्रेक्षितम् ।
वारंवारमपानमूर्ध्वमनिलं प्रोच्चारयेत्पूरितं
मुञ्चन्प्राणमुपैति बोधमतुल शक्तिप्रबोधान्नरः ॥५२||
By holding both hands in the shape of bowl, by sitting still in padmasana, by pushing chin towards
the chest, by meditating upon kundalini, by pranayama i.e., merging (prana dimension of ) air with
apana dimension of air, holding it inside (kumbhaka) & then exhaling; kundalini awakens, rises
upward and provides the bliss of true knowledge.
ಯೋಗ ಸಾಧಕನು ಎರಡೂ ಅಂಜಲಿಗಳನ್ನು ಗಟ್ಟಿಯಾಗಿ ಜೋಡಿಸಿಕೊಂಡು, ಪದ್ಮಾಸನದಲ್ಲಿ ಸ್ಥಿರವಾಗಿದ್ದು, ಗದ್ದವನ್ನು
ಹೃದಯಸ್ಥಾನದತ್ತ ಇಟ್ಟು ಕುಂಡಲಿನಿಯ ಧ್ಯಾನಮಾಡುತ್ತ ಮತ್ತೆ ಮತ್ತೆ ಪ್ರಾಣಾಯಾಮದ ಮೂಲಕ ವಾಯುವನ್ನು ಸೆಳೆದುಕೊಂಡು
ಅದನ್ನು ಅಪಾನ ವಾಯುವಿನಲ್ಲಿ ಮಿಲನಗೊಳಿಸಿ ಕುಂಭಕದ ಮೂಲಕ ವಾಯುವನ್ನು ನಿಯಂತ್ರಿಸಿ ಶ್ವಾಸವನ್ನು ಹೊರಗೆ ಬಿಡುವುದರಿಂದ
ಶಕ್ತಿಯ (ಪಬೋಧನೆ) ಜಾಗರಣೆಯಿಂದ ಅಪರಿಮಿತ ಜ್ಞಾನವುಂಟಾಗುವುದು. (ಕುಂಡಲಿನೀ ಶಕ್ತಿಯು) ಪ್ರಾಣವಾಯುವಿನ ಕುಂಭಕ ಮತ್ತು
ರೇಚಕಗಳ ಸಂಯೋಜನೆಯಿಂದ ಎಚ್ಚರಗೊಂಡು ಮೇಲೇರುತ್ತದೆ ಮತ್ತು ಸಾಧಕನಿಗೆ ಪರಮ ಜ್ಞಾನಾನುಭವವನ್ನು ನೀಡುತ್ತದೆ.
अङ्गानां मर्दनं कुर्याच्छ्रमजातेन वारिणा ।
कट्वम्ललवणत्यागी क्षीरभोजनमाचरेत् ॥५३||
Perspiration occurring due to the practice of hata yoga should be rubbed back to the body.
Salt and sour food to be avoided. Milk shall be consumed
ಅಭ್ಯಾಸದ ಕಾರಣದಿಂದಾಗಿ ಶರೀರದಲ್ಲಿಂದ ಹೊರಬರುವ ಶ್ರಮಬಿಂದುವನ್ನು ಅಂದರೆ ಬೆವರನ್ನು ಶರೀರದಲ್ಲಿಯೇ ಮರಳಿ ತಿಕ್ಕಬೇಕು.
ಉಪ್ಪು ಮತ್ತು ಹುಳಿರಸಯುಕ್ತ ಭೋಜನವನ್ನು ತ್ಯಜಿಸಬೇಕು. ಹಾಲನ್ನು ಮಾತ್ರ ಸೇವಿಸಬೇಕು.
ब्रह्मचारी मिताहारी त्यागी योगपरायणः ।
अब्दादूर्ध्वं भवेत्सिद्धो नात्र कार्या विचारणा ॥ ५४||
Yogic practitioner, practicing celibacy, light-diet & renouncement - for one year, becomes proficient in
yoga.
ಬ್ರಹ್ಮಚರ್ಯ ಪಾರಾಯಣನು ಮತ್ತು ಅಲ್ಪಾಹಾರಿಯು, ತ್ಯಾಗಿಯಾದ ಯೋಗಸಾಧಕನು ಒಂದು ವರ್ಷದ ಅಭ್ಯಾಸದ ನಂತರ ಯೋಗಿ
ಸಿದ್ಧನಾಗುತ್ತಾನೆ.
सुस्निग्धं मधुराहारं चतुर्थांशविवर्जितम् ।
भुज्यते सुरसम्प्रीत्यै मिताहारी स उच्यते ॥५५||
The one who eats (a) one-fourth of appetite; (b)
such food which is subtle & which is not
burdensome on body; & (c) for the love of his
personal deity - is considered light-dieted
ತನ್ನ ಇಷ್ಟ ದೇವತೆಯ ಪ್ರೀತಿಗಾಗಿ ಸ್ನಿಗ್ಧವಾದ ಸುಲಭವಾಗಿ
ಪಚನವಾಗುವ ಹಾಗೂ ಮಧುರವಾದ ಶರೀರದ ಶೋಷಣೆ
ಮಾಡದ ಸ್ವಾದಯುಕ್ತ ಭೋಜನವನ್ನು ಉದರದ 1/4 ಅಂಶ
ವರ್ಜಿತವಾಗಿ ಸ್ವೀಕರಿಸಬೇಕು. ಅಂಥವರಿಗೆ ಮಿತಾಹಾರಿ ಎಂದು
ಕರೆಯಲಾಗುತ್ತದೆ
कन्दोर्ध्वं कुण्डलीशक्तिरष्टधा कुण्डलाकृतिः ।
बन्धना च मूढानां योगिनां मोक्षदा स्मृता || ५६||
Upon gonad, which is the source of channels of
energy, eight-fold-annual-shaped kundalini
resides. This strong kundalini binds the ignorant
and emancipates yogis.
ನಾಡಿಗಳ ಉತ್ತತ್ತಿ ಸ್ಥಾನವಾದ ಕಂದದ ಮೇಲೆ ಎಂಟು
ಕುಂಡಲಾಕಾರದಲ್ಲಿದ್ದು ಬಲವತಿಯಾದ ಕುಂಡಲಿನಿಯು
ಅಜ್ಞಾನಿಗಳ ಬಂಧನಕಾರಿಣಿಯಾಗಿ ಹಾಗೂ ಯೋಗಿಗಳಿಗೆ
ಮೋಕ್ಷಪ್ರದಾನ ಮಾಡುವುದಾಗಿದೆ.
महामुद्रां नभोमुद्रां उड्डियानं जलन्धरम् ।
मूलबन्धञ्च यो वेत्ति स योगी मुक्तिभाजनम् ॥५७||
By practicing - mahamudra, nabhomudra, uddiyana banda, jalandhara banda, yogi becomes
eligible for emancipation.
ಮಹಾಮುದ್ರಾ, ನಭೋಮುದ್ರಾ, ಉಡ್ಡಿಯಾನ ಬಂಧ ಜಾಲಂಧರಬಂಧದ ಅಭ್ಯಾಸ ಮಾಡುವುದರಿಂದ ಯೋಗಿಯು ಮುಕ್ತಿಯನ್ನು
ಪಡೆಯುತ್ತಾನೆ. ಅಂದರೆ ಮೋಕ್ಷ ಪ್ರಾಪ್ತಿಗಾಗಿ ಯೋಗ್ಯ ಅಧಿಕಾರಿಯಾಗುತ್ತಾನೆ.
शोधनं नाडिजालस्य चालनं चन्द्रसूर्ययोः ।
रसानां शोषणं चैव महामुद्रा विधीयते ॥५८||
Channels of energy shall be cleansed and both left & right side channels shall be activated; the
life-essence in the body shall be exploited optimally; this is called mahamudra.
ನಾಡಿಗಳ ಸಮೂಹವನ್ನು ಕೊಳೆರಹಿತಗೊಳಿಸಿಕೊಳ್ಳಬೇಕು. ಚಂದ್ರ ಮತ್ತು ಸೂರ್ಯರ ಚಾಲನೆ ಮತ್ತು ಶರೀರ ರಸದ
ಶೋಷಣೆಯನ್ನು (ಶರೀರದಲ್ಲಿ ಅದರ ಜೀರ್ಣಗೊಳಿಸುವಿಕೆಯನ್ನು ಅಥವಾ ಪಚನಗೊಳಿಸುವಿಕೆಯನ್ನು) ಮಹಾಮುದ್ರೆಯೆಂದು
ಕರೆಯಲಾಗಿದೆ.
वक्षोन्यस्तहनुः प्रपीड्य सुचिरं योनिं च वामाङ्घ्रिणा|
हस्ताभ्यामनुधारयन् प्रसरितं पादं तथा दक्षिणम् |
आपूर्य श्वसनेन कुक्षियुगलं बद्ध्वा शनैरेचये-
देषा व्याधिविनाशिनो सुमहती मुद्रा नृणां कथ्यते ॥५९||
The yoga practitioner should - hold the chin firmly in the chest; hold the left heel pressing upon the
gonad area (for a considerable amount of time); hold the extended right leg with both hands. With
deep inhalation lungs should be filled with air; withheld as per rite; and lungs should be emptied with
slow exhalation. This process which cures all diseases is called *maha-mudra*
ಎದೆಯ ಹೃದಯಲ್ಲಿ ಗದ್ದವನ್ನು ಗಟ್ಟಿಯಾಗಿಟ್ಟು ಯೋಗ ಸಾಧಕನು ಎಡಗಾಲಿನ ಹಿಮ್ಮಡದಿಂದ ಯೋನಿಸ್ಥಾನವನ್ನು ಬಹಳ ಹೊತ್ತಿನವರೆಗೆ
ಹತ್ತಿಕ್ಕಿಟ್ಟು ಎರಡೂ ಕೈಗಳಿಂದ ಉದ್ದಗೊಳಿಸಿದ ಬಲಗಾಲನ್ನು ಹಿಡಿದುಕೊಂಡು, ಪೂರಕದ ಮೂಲಕ ಎರಡೂ ಪುಪ್ಪಸಗಳನ್ನು
ವಾಯುವಿನಿಂದ ತುಂಬಿಕೊಂಡು ಕುಂಭಕದ ವಿಧಿಪ್ರಕಾರ ತಡೆದು ರೇಚಕದ ಮೂಲಕ ಸಾವಕಾಶವಾಗಿ ಹೊರಗೆ ಬಿಡಬೇಕು. ಇದುವೇ
ಮಾನವರ ಸಕಲ ವ್ಯಾದಿಗಳನ್ನು ನಾಶಗೊಳಿಸುವ ಮಹಾಮುದ್ರೆಯಾಗಿದೆ ಎಂದು ಕರೆಯಲ್ಪಡುತ್ತದೆ.
चन्द्राङ्गेण समभ्यस्य सूर्याङ्गेणाभ्यसेत् पुनः ।
यावत्तुल्या भवेत् संख्या ततो मुद्रां विसर्जयेत् ॥६0||
While practicing *maha-mudra*, the practitioner should also practice inhaling from the right nostril &
exhaling from the left nostril; again inhaling from the left & exhaling from right. With this balanced
pranayama, mudra should be released.
ಮಹಾಮುದ್ರೆಯ ಸಾಧಕನು ಮೊದಲು ಬಲಹೊರಳೆಯಿಂದ ಚಂದ್ರನಾಡಿಯಿಂದ ಶ್ವಾಸವನ್ನು ಸೆಳೆದುಕೊಂಡು ಎಡ ಹೊರಳೆಯಿಂದ
ಸೂರ್ಯನಾಡಿಯಿಂದ ಶ್ವಾಸವನ್ನು ಹೊರದೂಡುವ ಅಭ್ಯಾಸ ಮಾಡಬೇಕು. ಮತ್ತೆ ಸೂರ್ಯನಾಡಿಯಿಂದ ಶ್ವಾಸವನ್ನು ಸೆಳೆದುಕೊಂಡು
ಚಂದ್ರನಾಡಿಯಿಂದ ಹೊರದೂಡಬೇಕು. ಈ ರೀತಿ ಸಮಾನ ಮಾತ್ರೆಯಲ್ಲಿ ಪ್ರಾಣಾಯಾಮವನ್ನು ಮಾಡುತ್ತ ಮುದ್ರೆಯನ್ನು ಕೈಬಿಡಬೇಕು.
नहि पथ्यमपथ्यं वा रसाः सर्वेऽपि नीरसाः ।
अपि भुक्त विषं घोरं पीयूषमिव जीर्यते ॥६१||
Once maha-mudra is perfected, for practitioners - food’s combination or miscombination and
essence or lack thereof - become insignificant. Even poisonous substances digest like nectar of
immortality.
ಮಹಾಮುದ್ರೆಯ ಅಭ್ಯಾಸವು ಸಿದ್ಧವಾದ ಮೇಲೆ ಸಾಧಕನಿಗೆ ಪಥ್ಯ ಅಪಥ್ಯ, (ಮಧುರ, ಕಟು, ಲವಣ, ಪಿತ್ತ ಆಮ್ಲಾದಿ) ಸಕಲ ರಸಗಳು
ಮಹತ್ವಹೀನ, ನೀರಸವಾಗುತ್ತವೆ ಮತ್ತು ವಿಷವನ್ನು ತಿಂದರೂ ಅಮೃತದಂತೆ ಶರೀರದಲ್ಲಿ ಪಚನವಾಗುತ್ತದೆ.
क्षयकुष्ठगुदावर्तगुल्माजीर्णपुरोगमाः ।
रोगास्तस्य क्षयं यान्ति महामुद्रां च योऽभ्यसेत् ॥६२||
With the practice of “mahamudra”, diseases like tuberculosis, leprosy, constipation, liver inflammation…etc will be relieved.
ಇದರಿಂದ ಅಭ್ಯಾಸಿಗೆ ಕ್ಷಯ, ಕುಷ್ಠ, ಉದಾವರ್ತ (ಮಲಬದ್ಧತೆ) ಗುಲ್ಕ (ಯಕೃತ್ತಿನ ಉಬ್ಬುವಿಕೆ) ಅಜೀರ್ಣವೇ ಮೊದಲಾದ ರೋಗಗಳು ಶಮನವಾಗುತ್ತವೆ.
कथितेयं महामुद्रा सर्वसिद्धिकरी नृणाम् ।
गोपनीया प्रयत्नेन न देया यस्य कस्यचित् ॥६३||
*This mahamudra is highly effective for humans. Practice shall be kept secret and shouldn't be taught to the undeserving.*
ಈ ಮಹಾಮುದ್ರಾ ಮಾನವರಿಗಾಗಿ ಬಹು ಸಿದ್ಧಿದಾಯಿನಿಯಾಗಿರುತ್ತದೆ. ಇದರ ಅಭ್ಯಾಸವನ್ನು ಪ್ರಯತ್ನಪೂರ್ವಕವಾಗಿ
ಗುಪ್ತವಿಡಬೇಕು. ಅಭ್ಯಾಸಕ್ಕಾಗಿ ಇದನ್ನು ಅನಧಿಕಾರಿಯಾದ ಯಾರಾರಿಗೋ ನಿರ್ದೇಶ ಮಾಡಬಾರದು.
कपालकुहरे जिह्वा प्रविष्टा विपरीतगा ।
ध्रुवोरन्तर्गता दृष्टिर्मुद्रा भवति खेचरी ॥ ।| ५४||
Curling the tip of the tongue, it should be pushed back into the mouth until it reaches above the soft palate. Vision should be centred between eyebrows. This is called khechari-mudra.
ನಾಲಿಗೆಯ ತುದಿಭಾಗವನ್ನು ಹಿಂತಿರುಗಿಸಿ ಕಪಾಲ ಕುಹರದಲ್ಲಿ ಪ್ರವೇಶ ಮಾಡಿಸಬೇಕು. ದೃಷ್ಟಿಯನ್ನು ಎರಡೂ ಭೂಮಧ್ಯದಲ್ಲಿ ಸ್ಥಿರಗೊಳಿಸಬೇಕು. ಇದಕ್ಕೆ ಖೇಚರಿ ಮುದ್ರೆಯೆನ್ನುವರು.
न रोगो मरणं तस्य न निद्रा न क्षुधा तृषा ।
न च मूर्च्छा भवेत्तस्य यो मुद्रां वेत्ति खेचरीम् ॥६५||
(Advance) practitioner of Khechari-mudra is not troubled by disease, death, sleep, hunger, thirst and unconsciousness.
ಯಾವ ಯೋಗಿ ಅಥವಾ ಯೋಗಸಾಧಕನು ಖೇಚರಿ ಮುದ್ರೆಯನ್ನು ಆಚರಿಸಿ ನಿಮಣನಾಗುವನೋ ಅವನು ರೋಗ, ಮೃತ್ಯು, ನಿದ್ರಾ, ಹಸಿವು ನೀರಡಿಕೆ ಮತ್ತು ಮೂರ್ಚ್ಛಾವಸ್ಥೆ ಮೊದಲಾದವುಗಳಿಂದ ಪೀಡಿತನಾಗುವುದಿಲ್ಲ.
पीड्यते न स शोकेन न लिप्यते स कर्मणा ।
बाध्यते न स कालेन यो मुद्रां वेत्ति खेचरीम् ॥६६||
Practitioner of Khechari mudra becomes emancipated from miseries, karma & death.
ಖೇಚರಿ ಮುದ್ರೆಯನ್ನಾಚರಿಸುವ ಸಾಧಕನಿಗೆ ಶೋಕವು ಪೀಡಿಸಲಾಗದು, ಕರ್ಮದ ಬಂಧನವಾಗುವುದಿಲ್ಲ. ಮೃತ್ಯುವಿನ ಭಯವಿರುವುದಿಲ್ಲ.
चित्तं चरति खे यस्माज्जिह्वा चरति खे गता।
तेनैव खेचरी मुद्रा सर्वसिद्धैर्नमस्कृता ॥६७||
Because the curled tip of the tongue, combined with vision centred between eyebrows - dissolves fluctuations of mind. Hence this Khechari mudra is revered by those who have attained siddhi.
ಯಾಕೆಂದರೆ ಸಾಧಕನ ನಾಲಿಗೆಯು ಎರಡೂ ಭ್ರೂಮಧ್ಯದ ಶೂನ್ಯಸ್ಥಾನದ ಆಕಾಶದಲ್ಲಿ ಮುಟ್ಟಿರುವುದರಿಂದ ಆತನ ಚಿತ್ತವು
ಶೂನ್ಯದಲ್ಲಿಯೇ ಅಂತರ್ಲೀನವಾಗುತ್ತದೆ. ಚಿತ್ತವು ಚಂಚಲವಾಗುವುದಿಲ್ಲ. ಹೀಗಾಗಿ ಎಲ್ಲ ಸಿದ್ದರಿಂದ ಖೇಚರಿ ಮುದ್ರೆಯು ಪೂಜ್ಯವಾಗಿದೆ ಮತ್ತು ವಂದನೀಯವಾಗಿರುತ್ತದೆ.
बिन्दुमूलं शरीरं तु शिरास्तत्र प्रतिष्ठिताः।
भावयन्ति शरीरं या आपादतलमस्तकम् ॥६८||
The basis, stability or origin of the body is the sap. Many channels of energy are spread across the body and due to this sap are kept vibrant.
ಶರೀರದ ಆಧಾರ, ಸ್ಥಿರತೆ ಅಥವಾ ಮೂಲವು ವೀರ್ಯವಾಗಿದೆ. ಶರೀರದಲ್ಲಿ ಆಪಾದ ಮಸ್ತಕದ ಅನೇಕ ನಾಡಿಗಳು ಪ್ರತಿಷ್ಠಾಪಿತವಾಗಿದ್ದು ವೀರ್ಯದಿಂದಾಗಿ ಅಥವಾ ಬಿಂದುವಿನಿಂದಾಗಿ ಜೀವಂತವಾಗಿರುತ್ತದೆ,
खेचर्या मुद्रितं येन विवरं लम्बिकोर्ध्वतः।
न तस्य क्षरते बिंदु कामिन्यालिङ्गितस्य च ॥६९||
The Yogi - who closes soft palate via Khechari mudra, will not lose the sap of life even during bodily contact with a sensual company.
ಯಾವ ಯೋಗಿಯು ಖೇಚರಿ ಮುದ್ರೆಯಿಂದ ನಾಲಿಗೆಯ ಮುಂಭಾಗದಿಂದ ತಾಲುವಿನ ಮೇಲಿನ ವಿವರವನ್ನು ಮುಚ್ಚಿಕೊಳ್ಳುವನೋ, ಅವನ ಬಿಂದು ವೀರ್ಯವು
ಕಾಮಿನಿಯ ಆಲಿಂಗನದಿಂದಲೂ ಸ್ಖಲಿತವಾಗುವುದಿಲ್ಲ.
यावद् बिन्दुः स्थितो देहे तावन्मृत्युभयं कुतः ।
यावद् बद्धा नभोमुद्रा तावद् बिन्दुर्नगच्छति ॥७०||
Until the sap of life is preserved in the body, there is no fear of death. Until practice of Khechari mudra is preserved, the sap of life is not lost even though it flows downwards
ಶರೀರದಲ್ಲಿ ಬಿಂದು ಸ್ಥಿರವಾಗಿರುವರೆಗೆ ಮೃತ್ಯುವಿನ ಭಯವಿರುವುದಿಲ್ಲ. ಎಲ್ಲಿಯವರೆಗೆ ನಭೋ (ಖೇಚರಿ) ಮುದ್ರೆಯು ಬದ್ಧವಾಗಿರುವುದೋ ಸಿದ್ಧವಾಗಿರುವದೋ ಅಲ್ಲಿಯವರೆಗೆ ಬಿಂದುವು ಅಧೋಗಾಮಿಯಾದರೂ ಶರೀರದ ಹೊರಗೆ ಹೋಗಲಾರದು.
चलितोऽपि सदा बिन्दुः सम्प्राप्तश्च हुताशनम् ।
व्रजत्यूर्ध्वं हृतः शक्त्या निरुद्धो योनिमुद्रया ||७१||
In case by inadvertance, sap of life moves downwards due to fluctuation of mind, then by practice of Yoni-Mudra, it can be empowered and turned upwards.
ಖೇಚರಿ ಮೂಲಕ ಕಂಠನಾಳದ ಛಿದ್ರವನ್ನು ನಾಲಿಗೆಯ ಅಗ್ರಭಾಗದಿಂದ ಹಿಂತಿರುಗಿಸಿ ಆಕಾಶದಲ್ಲಿರಿಸುವದರಿಂದ, ಅಕಸ್ಮಾತ ಮನಸ್ಸಿನ ಚಂಚಲತೆಯಿಂದ ಬಿಂದುವು ಅಧೋಗಾಮಿಯಾಗಿ ನಾಭಿಯಲ್ಲಿರುವ ಅಗ್ನಿಸ್ಥಾನದಲ್ಲಿ ಬೀಳುತ್ತದೆ. ಆಗ ಯೋನಿಮುದ್ರೆಯ ಅಭ್ಯಾಸದಿಂದ ಶಕ್ತಿ ಪ್ರಬೋಧಗೊಂಡು ಕುಂಡಲಿನಿಯ ಸಹಾಯದಿಂದ ಊರ್ಧ್ವಮುಖವಾಗಿ ಬಿಂದುವನ್ನು ಹಿಂತಿರುಗಿಸಬಹುದು
स पुनर्द्विविधो बिन्दुः पाण्डुरो लोहितस्तथा ।
पाण्डुरं शुक्रमित्याहुर्लोहितं तु महारजः ॥ ७२|
Sap of life is of two kind: one is red and another is white. The (musculine) white sap is called Shukra and (musculine) red sap is called Maharaj
ಈ ಬಿಂದುವು ಎರಡು ತರಹದ್ದಾಗಿದ್ದು ಒಂದು ಬಿಳಿಯಾಗಿರುತ್ತದೆ. ಇನ್ನೊಂದು ಕೆಂಪಾಗಿರುತ್ತದೆ. ಬಿಳಿಯಾಗಿರುವ ಬಿಂದುವನ್ನು ಶುಕ್ರವೆಂದು ಕರೆದರೆ ಕೆಂಪಾದ ಬಿಂದುವನ್ನು ಮಹಾರಜವೆಂದು ಕರೆಯಲಾಗುತ್ತದೆ
.सिन्दूरद्रवसंकाशं (नाभि ) रविस्थाने स्थितं रजः ।
शशिस्थाने स्थितो बिन्दुस्तयोरैक्यं सुदुर्लभम् ॥७३||
(Femanine) Red sap is established in the solar aspect of the body and the (femanine) white sap is established in the lunar aspect of the body. The unitary operation of these two types of sap is very rare.
ಸಿಂಧೂರ ಬಣ್ಣದ ರಜವು ರವಿ (ನಾಭಿ) ಸ್ಥಾನದಲ್ಲಿರುವುದು ಮತ್ತು ಶುಕ್ರವು ಚಂದ್ರಸ್ಥಾನದಲ್ಲಿರುತ್ತವೆ. ಇವೆರಡರ ಏಕತೆಯು ಅತ್ಯಂತ ದುರ್ಲಭವಾಗಿದೆ. ಹದಿನಾರು ಆಧಾರಗಳ ಚಕ್ರವೇ ಚಂದ್ರನ ಸ್ಥಾನವೆಂದು ಹೇಳಲಾಗಿದೆ.
बिन्दुः शिवो रजः शक्तिश्चन्द्र बिन्दु रजो रविः ।
उभयो सङ्गमादेव प्राप्यते परमं पदम् ॥७४||
ಬಿಂದುವು ಶಿವವಾಗಿವೆ, ರಜವು ಶಕ್ತಿಯಾಗಿದೆ. ಅದರಂತೆ ಚಂದ್ರವು ಬಿಂದುವಾಗಿದೆ. ರಜವು ಸೂರ್ಯವಾಗಿದೆ. ಇವೆರಡರ ಸಂಗಮದಿಂದ ಸಾಧಕನಿಗೆ ಪರಮಪದದ ಪ್ರಾಪ್ತಿಯಾಗುತ್ತದೆ.
Muscluline sap (in our body) is the representation of musculine aspect of cosmic consciousness and the femanine sap (in our body) is the representation of femanine aspect of cosmic consciousness. They also represent lunar & solar aspect of our body. The confluence of these two aspects emancipates the sadhaka.
वायुना शक्तिचारेण प्रेरितं तु महारजः ।
बिन्दुना इडि सहैकत्वं भवेद् दिव्यं वपुस्तदा ॥७५||
By regulation of breath, Maharaja (red sap) can be turned upwards and then its confluence with (white) sap creates bliss in the body.
ವಾಯುವಿನ ಮೂಲಕ ಶಕ್ತಿಯ ಚಾಲನೆಗೊಳಿಸುವಿಕೆಯಿಂದ ಮಹಾರಜವು ಊರ್ಧ್ವಮುಖವಾಗಿ ಬಿಂದುವನ್ನು ಸೇರಿ ಒಂದಾಗುತ್ತದೆ. ಆಗ ಶರೀರವು ದಿವ್ಯವಾಗುತ್ತದೆ.
शुक्रं चन्द्रेण संयुक्तं रजः सूर्येण संयुतम् ।
तयोः समरसैकत्वं यो जानाति स योगवित् ॥७६||
White sap is with the lunar aspect of the body and the feminine aspect of the sap is with the solar aspect of the body. The one who comprehends their harmony - is Yogi
ಶುಕ್ರವು ಚಂದ್ರನಿಂದ ಕೂಡಿದೆ, ರಜವು ಸೂರ್ಯನಿಂದೊಡಗೂಡಿದೆ. ಇವೆರಡರ ಸಾಮರಸ್ಯದ ಐಕ್ಯವನ್ನು ಅರಿತವನೇ ಯೋಗದ ಜ್ಞಾನಿಯಾಗಿರುತ್ತಾನೆ
उड्डीनं कुरुते यस्मादविश्रान्तं महाखगः ।
उड्डीयानं तदेव स्यान्मृत्युमातङ्गकेसरी ॥७७||
Like an unrestingly flying giant bird (is a slayer of giant serpents), “uddiyana banda” is a lion for death-like elephant (bodily irregularities)
ವಿಶ್ರಾಮವಿಲ್ಲದೇ ಒಂದು ಪಕ್ಷಿಯು ಹಾರುತ್ತದೆ. ಅದರಂತೆ ಉಡ್ಡಿಯಾನ ಬಂಧವು ಮೃತ್ಯುರೂಪಿ ಆಸೆಗೆ ಸಿಂಹ ಸ್ವರೂಪವಾಗಿದೆ.
उदरात्पश्चिमे भागे ह्यधो नाभेर्निगद्यते ।
उड्डीयानस्य बन्धोऽयं तत्र बन्धो विधीयते ॥७८||
(Uddiyana) bhanda’s practice is done in the abdominal wall and the navel's lower part. The name derives from this exercise and it is to be done as mandated (by gurus)
बध्नाति हि शिराजालमधोगामिशिरोजलम् ।
ततो जालन्धरो बन्धः कण्ठदुःखौघनाशनः ॥ ७९||
"Jalandara bandha" arrests the web of channels of energy and prevents the sap of life from moving downwards from neurocranium. (The practice of Jalandhar Bandha) clears anomalies in the parathyroid gland.
ಜಾಲಂಧರ ಬಂಧವು ನಾಡಿಗಳ ಜಾಲವನ್ನು ಬಂಧಿಸುವುದು ಮತ್ತು ಶಿರದಿಂದ ಸ್ರವಿಸುವ (ಬೀಳುವ) ಜಲ (ಸಹಸ್ರಾರದ ದ್ರವಾಮೃತವನ್ನು) ಕೆಳಗೆ ಬೀಳುವುದನ್ನು ನಿಲ್ಲಿಸುತ್ತದೆ. ಆದುದರಿಂದ ಇದು ಕಂಠದಲ್ಲಿಯ ದೋಷಗಳನ್ನು ನಾಶಪಡಿಸುತ್ತದೆ.
जालान्धरे कृते बन्धे कण्ठसङ्कोचलक्षणे ।
पीयूषं न पतत्यग्नौ न च वायुः प्रकुप्यति ॥८०||
Jalandhara Bandha arrests parathyroid gland and hence the sap of life (which has turned elixir by moving upwards) doesn't fall in the fire (ie., doesn't move downwards towards burning desires) and gases in the body are prevented from outbursting.
ಜಾಲಂಧರ ಬಂಧವು ಕಂಠಸ್ಥಾನವನ್ನು ಬದ್ಧಗೊಳಿಸುವುದರಿಂದ-ಮುಚ್ಚುವುದರಿಂದ, ಅಮೃತವು ಅಗ್ನಿಯಲ್ಲಿ ಬೀಳಲಾರದು ಹಾಗೂ ವಾಯುವು ಪ್ರಕೋಪಗೊಳ್ಳಲಾರದು.
पार्ष्णिभागेन सम्पीड्य योनिमाकुञ्चयेद् गुदम् । अपानमूर्ध्वमाकृष्य मूलबन्धो विधीयते ॥ ८१||
While pulling up "apana vayu" (and merging it with "prana vayu"), press left heals on to gonad and contract & lift the muscles of your pelvic floor. This is the practice of "mula bandha"
ಅಪಾನವಾಯುವನ್ನು ಮೇಲೆಳೆದುಕೊಂಡು (ಪ್ರಾಣವಾಯು ಏನೊಡನೆ ಸಮ್ಮೇಳಿಸುತ್ತ) ಎಡಗಾಲಿನ ಹಿಮ್ಮಡದಿಂದ ಯೋನಿಸ್ಥಾನವನ್ನು ದೃಢವಾಗಿ ಒತ್ತಿ ಹಿಡಿದು ಗುದವನ್ನು ಸಂಕೋಚಗೊಳಿಸಿಕೊಳ್ಳಬೇಕು. ಇದೇ ಮೂಲಬಂಧದ ಅಭ್ಯಾಸವಾಗಿದೆ.
अपानप्राणयोरैक्यात् क्षयो मूत्रपुरीषयोः ।
युवा भवतिवृद्धोऽपि सततं मूलबन्धनात् ॥ ८२||
The integration of “prana” and “apana” by continuous practice of mula-bandha, bodily excrement are cleansed and even elderly enjoy the youth.
ಇದರಲ್ಲಿ ಅಪಾನ ಮತ್ತು ಪ್ರಾಣವಾಯುವಿನ ಐಕ್ಯವಾಗುವದರಿಂದ ಮಲಮೂತ್ರಗಳ ನಾಶವಾಗುವಿಕೆಯಿಂದ ಮುದುಕನಾದ ಮನುಷ್ಯನೂ ಹರೆಯದವನಾಗುತ್ತಾನೆ.
पद्मासनं समारुह्य समकायशिरोधरः ।
नासाग्रदृष्टिरेकान्ते जपेदोङ्कारमव्ययम् ॥८३||
By isolating oneself, sitting in padmasana, keeping neck and head straight, keeping vision at the tip of the nose, the practitioner should chant “om”.
ಏಕಾಂತ ಸ್ಥಾನದಲ್ಲಿ ಸದೃಢವಾದ ಪದ್ಮಾಸನ ಹಾಕಿಕೊಂಡು ಕಂಠ ಮತ್ತು ತಲೆಯನ್ನು ಏಕರೇಖೆಯಲ್ಲಿಟ್ಟು - ನೆಟ್ಟಗೆ ಕುಳಿತುಕೊಂಡು ಮೂಗಿನ ತುದಿಯ ಮೇಲೆ ದೃಷ್ಟಿಯನ್ನು ಸ್ಥಿರಗೊಳಿಸಿಕೊಂಡು ಸಾಧಕನು ಅವ್ಯಯವಾದ (ಸನಾತನ ಬ್ರಹ) ಓಂಕಾರದ ಜಪ ಮಾಡಬೇಕು.
त्रयः कालास्त्रयो वेदास्त्रयो लोकास्त्रयो स्वराः ।
त्रयो देवाः स्थिता यत्र तत्परं ज्योतिरोमिति ॥ ८५||
Vyahriti represents past, present & future; rig, yajur and sama - vedas; earthly, higher & lower - dimensions; raised, not raised & sounded - pitch accents (in vedic chant); brahma, vishnu & mahesha - trinity of higher consciousness. This is the form of illuminative “om”.
ಅದರಲ್ಲಿ ಭೂತ, ಭವಿಷ್ಯ ಹಾಗೂ ವರ್ತಮಾನ-ತ್ರಿಕಾಲಗಳು; ಋಗ್, ಯಜುಃ ಮತ್ತು ಸಾಮ-ಮೂರು ವೇದಗಳು; ಸ್ವರ್ಗ, ಪಾತಾಳ ಮತ್ತು ಮೃತ್ಯುಲೋಕ (ಪೃಥ್ವಿ)-ತ್ರಿಲೋಕಗಳು; ಉದಾತ್ತ, ಅನುದಾತ್ ಹಾಗೂ ಸ್ವರಿತ-ಮೂರು ಸ್ವರಗಳು; ಮತ್ತು ಬ್ರಹ್ಮ, ವಿಷ್ಣು ಮತ್ತು ಮಹೇಶ-ಮೂರು ದೇವತೆಗಳಿರುತ್ತಾರೆ. ಅದೇ ಪರಮಜ್ಯೋತಿ ಓಂಕಾರಸ್ವರೂಪವಾಗಿದೆ.
क्रिया चेच्छा तथा ज्ञानं ब्राह्मी रौद्रीच वैष्णवी ।
त्रिधा शक्तिः स्थिता यत्र तत्परं ज्योतिरोमिति ॥८६||
Action, volition and illuminative knowledge are part of “Om”, represented by brahma, rudra and vishnu. “Om” is where all the trinities in the cosmos are present.
ಅದರಲ್ಲಿ ಕ್ರಿಯಾ, ಇಚ್ಛಾ ಹಾಗೂ ಜ್ಞಾನಜ್ಯೋತಿ ಓಂಕಾರವಾಗಿದೆ.
अकारश्च तथोकारोमकारो बिन्दुसंज्ञकः ।
तिस्त्रोमात्राः स्थिता यत्र तत्परं ज्योतिरोमिति ॥ ८७ ॥
In the illuminative “Om”, three syllabals are present: “a / ಅ/ अ", "u / ಉ / उ" and "ma / ಮ/ म" (and also the "indicative rest point")
ಅದರಲ್ಲಿ ಅ, ಊ, ಮ (ಬಿಂದು ಸಂಜ್ಞಕ) ಮೂರು ಮಾತ್ರಗಳಿರುತ್ತವೆ. ಆ ಓಂಕಾರವೇ ಪರಮಜ್ಯೋತಿಯಾಗಿದೆ.
वचसा तज्जपेद् बीजं वपुषा तत्समभ्यसेत् ।
मनसा तत्स्मरेन्नित्यं तत्परं ज्योतिरोमिति ॥ ८८ ॥
Practitioner should use voice to chant “om”, should use the entire body (via asana, pranayama & mudras) to experience “om” and should use mind to observer “om” (everywhere); since “om” is the illuminative light.
ವಾಣಿಯಿಂದ ಪ್ರಣವ'ಓಂ' ವನ್ನು ಜಪಿಸಬೇಕು. ಶರೀರದಿಂದ (ಆಸನ, ಪ್ರಾಣಾಯಾಮ, ಮುದ್ರಾಬಂಧದ ಅಭ್ಯಾಸದೊಂದಿಗೆ) ಅದರ ಚಿಂತನದಲ್ಲಿ ಮಗ್ನರಾಗಿರಬೇಕು ಹಾಗೂ ಮನಸ್ಸಿನಿಂದ ಪ್ರತಿನಿತ್ಯವೂ ಅದರ ಸ್ಮರಣೆಯನ್ನು ಮಾಡಬೇಕು (ಸ್ಮರಿಸಬೇಕು) ಆ ಪರಮಜ್ಯೋತಿಯೇ ಓಂಕಾರ ಸ್ವರೂಪವಾಗಿದೆ.
शुचिर्वाप्यशुचिर्वापि यो जपेत् प्रणवं सदा ।
लिप्यते न स पापेन पद्मपत्रमिवाम्भसा ॥ ८९ ॥
Without giving heed to cleanness or lack thereof, a sadhaka should always observe natural chanting of "om". Sadhaka will never suffer adverse results, like a lotus leaf which maintains freshness amidst water.
ಸಾಧಕನು ಶುಚಿಯಾಗಲಿ ಅಥವಾ ಅಶುಚಿಯಾಗಿರಲಿ ಆದರೆ ಅವನು ಪ್ರಣವವನ್ನು ಸದಾ ಜಪಿಸುತ್ತಿರಬೇಕು. ಅದರಿಂದ ಅವನು ಪಾಪಕರ್ಮಗಳಿಂದ ಲಿಪ್ತನಾಗುವುದಿಲ್ಲ. ಹೇಗೆಂದರೆ ಕಮಲದ ಎಲೆಯು ನೀರಿನಲ್ಲಿ ಇದ್ದರೂ ನೀರಿನಿಂದ ಅಂಟಿಕೊಂಡಿರಲಾರದಂತೆ.
चले वाते चलो बिन्दुर्निश्चले निश्चलो भवेत् ।
योगी स्थाणुत्वमाप्नोति ततो वायुं निरोधयेत् ॥ ९०||
As long as life energy in the body is volatile, the sap of life will remain volatile. Once life energy is stabalized, the sap of life also stabalizes and a yogi achieves this by (yogic) practices.
ಶರೀರದಲ್ಲಿ ಪ್ರಾಣವು ಚ೦ಚಲವಾಗಿರುವವರೆಗೆ (ನಿಶ್ಚಲಗೊಳಿಸಲಾರದ್ದರಿಂದ) ಬಿಂದು-ವೀರ್ಯವೂ ಸ್ಥಿರವಾಗುವುದಿಲ್ಲ. ಪ್ರಾಣವು ನಿಶ್ಚಲವಾದ ಮೇಲೆಯೇ ಬಿಂದುವೂ ನಿಶ್ಚಲವಾಗುತ್ತದೆ. ಯೋಗಿಯು ಸ್ಥಿರತೆಯ ಸಾಧನೆಯಲ್ಲಿ ಸಿದ್ಧಿಯನ್ನು ಮಾಡಿಕೊಳ್ಳುತ್ತಾನೆ.
यावद् बद्धो मरुद् देहे यावच्चित्तं निरामयम् ।
अतः कालभयाद् ब्रह्मा प्राणायामपरायणः ।९२||
As long as circulation of air throughout the body is stable, mind remains stable. Everyone including the highest learned, perform pranayama - observing inevitable parting with body someday.
ಶರೀರದಲ್ಲಿ ವಾಯುವು ಸ್ಥಿರವಾಗಿರುವವರೆಗೆ ಚಿತ್ತವು ನಿರಾಳವಾಗಿರುವುದು. ಮೃತ್ಯುವಿನ ಭಯದಿಂದ ಬ್ರಹ್ಮಾ, (ಯೋಗಿ ಮತ್ತು ಮುನಿಜನರು )ಪ್ರಾಣಾಯಾಮವನ್ನು ಮಾಡುತ್ತಿರುತ್ತಾರೆ.
(Kannada translation by Dr. Chandramauli Shivashankarappa Naykara and it's direct English translation)
ನಮಸ್ಕಾರ!
Greetings!
ಮಧ್ವೇಶ ಕೆ, ವೇದಿಕ್ ಟ್ರೈಬ್
Madhwesh K, Vedic Tribe